Chahal Divorce:(ಮಾ.22) ಧನಶ್ರೀ ವರ್ಮ ಹಾಗೂ ಯುಜ್ವೇಂದ್ರ ಚಹಾಲ್ ಅವರು ಪತಿ-ಪತ್ನಿ ಆಗಿ ಉಳಿದಿಲ್ಲ. ಅವರು ಮಾರ್ಚ್ 20ರಂದು ಅಧಿಕೃತವಾಗಿ ವಿಚ್ಛೇದನ ಪಡೆದರು. ಬಾಂದ್ರಾ ಕೌಟುಂಬಿಕ ನ್ಯಾಯಾಲಯ ಈ ದಂಪತಿಗೆ ವಿಚ್ಛೇದನ ನೀಡಿದೆ.

ಇವರ ದಾಂಪತ್ಯ ಕೊನೆ ಆದ ಕೆಲವೇ ದಿನಗಳಲ್ಲಿ ಧನಶ್ರೀ ಹಾಗೂ ಚಹಲ್ ಅವರ ವಿಚ್ಛೇದನ ಅರ್ಜಿ ವೈರಲ್ ಆಗಿದೆ. ಇದರಲ್ಲಿ ಕೆಲವು ಶಾಕಿಂಗ್ ವಿಚಾರಗಳು ರಿವೀಲ್ ಆಗಿವೆ. ಇದನ್ನು ನೋಡಿ ಅನೇಕರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಇವರ ಮಧ್ಯೆ ಇಷ್ಟೆಲ್ಲ ಆಗಿತ್ತೇ ಎಂದು ಅಚ್ಚರಿ ಹೊರಹಾಕಿದ್ದಾರೆ.

ಹಿಂದೂ ವಿವಾಹ ಕಾಯ್ದೆ ಪ್ರಕಾರ ಅರ್ಜಿ ಸಲ್ಲಿದ ತಕ್ಷಣ ವಿಚ್ಛೇದನ ಸಿಗೋದಿಲ್ಲ. ಪತಿ-ಪತ್ನಿ ಮಧ್ಯೆ ಸರಿ ಹೋಗುವ ಸಾಧ್ಯತೆ ಇರುತ್ತದೆ ಎಂಬ ಕಾರಣಕ್ಕೆ ಆರು ತಿಂಗಳು ಸಮಯಾವಕಾಶವನ್ನು ದಂಪತಿಗೆ ಕೌಟುಂಬಿಕ ನ್ಯಾಯಾಲಯ ನೀಡುತ್ತದೆ.
ಆದರೆ, ಧನಶ್ರೀ ಹಾಗೂ ಚಹಲ್ ತಕ್ಷಣವೇ ವಿಚ್ಛೇದನ ಬೇಕು ಎಂದು ಕೂತಿದ್ದರು. ಆ ಬಳಿಕ ದಂಪತಿ ಬಾಂಬೆ ಹೈಕೋರ್ಟ್ಗೆ ತೆರಳಿ “ನಾವಿಬ್ಬರೂ ಒಪ್ಪಿಯೇ ವಿಚ್ಛೇದನ ಪಡೆಯುತ್ತಿದ್ದೇವೆ. ಆರು ತಿಂಗಳ ಕಾಯುವಿಕೆ ನಮಗೆ ಅಗತ್ಯವಿಲ್ಲ” ಎಂದು ಅರ್ಜಿಯಲ್ಲಿ ಕೋರಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಕೌಟುಂಬಿಕ ನ್ಯಾಯಾಲಯಕ್ಕೆ ತಕ್ಷಣವೇ ಈ ದಂಪತಿಗೆ ವಿಚ್ಛೇದನ ನೀಡಲು ಸೂಚಿಸಿತ್ತು.

ಈಗ ಅರ್ಜಿಯಲ್ಲಿ ಒಂದು ಶಾಕಿಂಗ್ ವಿಚಾರ ರಿವೀಲ್ ಆಗಿದೆ. ಈ ದಂಪತಿ 2020ರ ಡಿಸೆಂಬರ್ನಲ್ಲಿ ವಿವಾಹ ಆಯಿತು. ಜೂನ್ 2022ರಂದು ಇವರು ಬೇರೆ ಆದರು. ಹೌದು, ಚಹಲ್ ಹಾಗೂ ಧನಶ್ರೀ ಈ ಮದುವೆ ನಡೆದ ಕೇವಲ 19 ತಿಂಗಳಿಗೆ ದೂರ ಆದರು. ಈ ಬಗ್ಗೆ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದು ಶಾಕಿಂಗ್ ಎನಿಸಿದೆ.


ಏಕೆಂದರೆ 2022ರ ಜೂನ್ ಬಳಿಕ ಅನೇಕ ಬಾರಿ ಧನಶ್ರೀ ಹಾಗೂ ಚಹಲ್ ಅವರು ಒಟ್ಟಿಗೆ ಕಾಣಿಸಿಕೊಂಡರು. ಬೇರೆ ಆದ ಬಳಿಕವೂ ಇವರು ಒಟ್ಟಿಗೆ ಕಾಣಿಸಿಕೊಂಡು ಫೋಸ್ ಕೊಟ್ಟಿದ್ದು ತುಂಬಾನೇ ನಾಟಕೀಯವಾಗಿತ್ತು. ಈ ಮೊದಲು ಧನಶ್ರೀ ಅವರು ತಮ್ಮ ಹೆಸರಿನ ಮುಂದೆ ಚಾಹಲ್ ಎಂದು ಸೇರಿಸಿಕೊಂಡಿದ್ದರು. ಆದರೆ, 2023ರಲ್ಲಿ ಇವರು ಇದನ್ನು ತೆಗೆದೇ ಬಿಟ್ಟರು. ಇದರಿಂದ ಅವರು ಬೇರೆ ಆದರು ಎಂದು ತಿಳಿದು ಬಂದಿದೆ.
