Fri. Apr 4th, 2025

ದಾಂಡೇಲಿ :(ಮಾ.22) ಕುಡಿದ ನಶೆಯಲ್ಲಿ ಯುವಕನೋರ್ವ ನೇಣಿಗೆ ಶರಣಾದ ಘಟನೆ ನಗರದ 14ನೇ ಬ್ಲಾಕಿನ ಭಾಗ್ಯಮಂದಿರದಲ್ಲಿ ಇಂದು ಶನಿವಾರ ನಡೆದಿದ್ದು, ಈ ಬಗ್ಗೆ ಮಧ್ಯಾಹ್ನ 12:00 ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ⭕Chahal Divorce: ಧನಶ್ರೀ-ಚಹಲ್ ವಿಚ್ಛೇದನ ಅರ್ಜಿಯಲ್ಲಿದೆ ಶಾಕಿಂಗ್ ವಿಷಯ!!

14ನೇ ಬ್ಲಾಕಿನ ಭಾಗ್ಯಮಂದಿರದ ನಿವಾಸಿಯಾಗಿರುವ 22 ವರ್ಷ ವಯಸ್ಸಿನ ಅಜಯ್ ಸಿಂಗ್ ಬಾಲಾಜಿ ಸಿಂಗ್ ಸುಬೇದಾರ್ ಎಂಬಾತನೆ ಕುಡಿದ ನಶೆಯಲ್ಲಿ ನೇಣಿಗೆ ಶರಣಾದ ಯುವಕನಾಗಿದ್ದಾನೆ.

ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯದಲ್ಲಿ ಈತ ನೇಣಿಗೆ ಶರಣಾಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ನಗರ ಠಾಣೆಯ ಪಿಎಸ್ಐ ಅಮೀನ್ ಅತ್ತಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಕೊಂಡೊಯ್ಯಲಾಗಿದೆ.

Leave a Reply

Your email address will not be published. Required fields are marked *