ಪುತ್ತೂರು:(ಮಾ.22) ಟೆಲಿಗ್ರಾಮ್ ನಲ್ಲಿ ಟಾಸ್ಕ್ ಕಂಪ್ಲೀಟ್ ಮಾಡಲು ಹೋಗಿ ಗೋಳಿತ್ತೊಟ್ಟಿನ ಯುವತಿ 9.97 ಲಕ್ಷ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ⭕ಬಂಟ್ವಾಳ : ರಸ್ತೆ ದಾಟುತ್ತಿದ್ದ ಮಹಿಳೆಗೆ ಅಪರಿಚಿತ ಕಾರು ಡಿಕ್ಕಿ
ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಮಂಗಳೂರಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಗೆ ಫೆ. 15ರಂದು ಟೆಲಿಗ್ರಾಮ್ ನಲ್ಲಿ ಟಾಸ್ಕ್ ಕಂಪ್ಲೀಟ್ ಮಾಡಿದರೆ ಹಣ ನೀಡುವುದಾಗಿ ತಿಳಿಸಿದ್ದರು. ಯುವತಿಯ ಬ್ಯಾಂಕ್ ಖಾತೆ ವಿವರ ತೆಗೆದುಕೊಂಡು ಟಾಸ್ಕ್ ಕಂಪ್ಲೀಟ್ ಮಾಡಿದ್ದಕ್ಕೆ 150 ರೂ., 250 ರೂ. ಕಳುಹಿಸಿದ್ದರು.

ಯುವತಿ ಆರು ಟಾಸ್ಕ್ ಕಂಪ್ಲೀಟ್ ಮಾಡಿದ ನಂತರ ಹಣ ಡೆಪಾಸಿಟ್ ಮಾಡಲು ತಿಳಿಸಿದ್ದು ಅದರಂತೆ ಯುವತಿ 1 ಸಾವಿರ ರೂ. ಕಳುಹಿಸಿದ್ದಕ್ಕೆ 1300 ರೂ., 2000 ರೂ. ಕಳುಹಿಸಿದ್ದಕ್ಕೆ 2600 ರೂ., 3000 ರೂ.ಕಳುಹಿಸಿದ್ದಕ್ಕೆ 3900 ರೂ.,10 ಸಾವಿರ ರೂ. ಕಳುಹಿಸಿದ್ದಕ್ಕೆ 13 ಸಾವಿರ ರೂ.ಯುವತಿಯ ಖಾತೆಗೆ ಬಂದಿದೆ.


ನಂತರ ಹಂತ ಹಂತವಾಗಿ ಒಟ್ಟು 9,97,450 ರೂಪಾಯಿಯನ್ನು ಅಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದು ಸದ್ರಿ ಹಣವನ್ನು ಮರುಪಾವತಿಸುವಂತೆ ಕೇಳಿದಾಗ ನೆಫ್ಟ್ ಮಾಡಲು ಅಸಾಧ್ಯವಾಗಿದ್ದು ಇನ್ನು ಹೆಚ್ಚಿನ ಹಣ ಹಾಕಿದರೆ ಮರುಪಾವತಿಸುವುದಾಗಿ ತಿಳಿಸಿದ್ದಾರೆ.
ಅಷ್ಟರಲ್ಲಿ ತಾನು ವಂಚಕರ ಬಲೆಗೆ ಬಿದ್ದ ವಿಚಾರ ತಿಳಿದ ಯುವತಿ ಠಾಣೆಗೆ ದೂರು ನೀಡಿದ್ದಾರೆ.
