Fri. Apr 4th, 2025

Sonu Gowda: ಸೋನು ಗೌಡ ಮಾಜಿ ಪತಿಯಿಂದಲೇ ಖಾಸಗಿ ಫೋಟೋಗಳು ಲೀಕ್!? – ಇದೇ ಅವರಿಬ್ಬರ ಡಿವೋರ್ಸ್ ಗೆ ಕಾರಣವಾಯಿತಾ?!

Sonu Gowda: (ಮಾ.22) ʻಇಂತಿ ನಿನ್ನ ಪ್ರೀತಿಯʼ ಸಿನಿಮಾ ಖ್ಯಾತಿಯ ನಟಿ ಸೋನು ಗೌಡ ನಟನೆಯಿಂದಲೇ ಸಿನಿ ಪ್ರೇಕ್ಷಕರ ಮನ ಗೆದ್ದಿರುವ ನಟಿ. ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʻಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ ʻರಾಜನಂದಿನಿʼ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದರು.

ಇದನ್ನೂ ಓದಿ: ⭕ಭೋಪಾಲ್‌: 4 ತಿಂಗಳ ಹಿಂದೆ ಮದುವೆಯಾಗಿದ್ದ ವೈದ್ಯೆ ಶವವಾಗಿ ಪತ್ತೆ!!

ಒಂದು ಟೈಮ್‌ನಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರತಿಸಿಕೊಂಡಿದ್ದ ಸೋನು ಗೌಡ ಜೀವನದಲ್ಲಿ, ನಡೆಯ ಬಾರದ ಕಹಿ ಘಟನೆಗಳೇ ನಡೆದು ಹೋಯಿತು. ಅದರಲ್ಲೂ ಅವರ ಖಾಸಗಿ ಫೋಟೋ ಲೀಕ್‌ ಆಗಿದ್ದು ಶಾಕಿಂಗ್‌ ಕೂಡ ಹೌದು. ಈ ಬಗ್ಗೆ ಇದೀಗ ಸೋನು ಗೌಡ ಮನಬಿಚ್ಚಿ ಮಾತನಾಡಿದ್ದಾರೆ. ಅಷ್ಟಕ್ಕೂ ಆ ಫೋಟೋಗಳು ಲೀಕ್‌ ಆಗಿದ್ದೇಗೆ? ಮಾಜಿ ಪತಿಯೇ ಲೀಕ್‌ ಮಾಡಿದ್ರಾ? ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ.

ಮಾಜಿ ಗಂಡನ ಬಗ್ಗೆ ಸೋನು ಗೌಡ ಮಾತು:
ಮಾಜಿ ಪತಿಯ ಬಗ್ಗೆ ಮಾತನಾಡಿದ ಸೋನು ಗೌಡ, “ನನ್ನ ಮಾಜಿ ಗಂಡ ನಟ ಶ್ರೀನಗರ ಕಿಟ್ಟಿ ಗೆಳೆಯ. ಅವರ ಹೆಸರು ಮನೋಜ್‌ ಕುಮಾರ್‌, ನಮ್ಮಿಬ್ಬರ ಪರಿಚಯ ಸ್ನೇಹದಿಂದ, ಪ್ರೀತಿಗೆ ತಿರುಗಿತು. ಇಬ್ಬರ ಮಧ್ಯೆ ಹೊಂದಾಣಿಕೆ ಆಗುತ್ತಿರಲಿಲ್ಲ, ಇಬ್ಬರ ನಡುವೆ ಎಲ್ಲವೂ ಸರಿಯಿರಲಿಲ್ಲ. ಈ ಮಧ್ಯೆ ತುಂಬಾ ಜನ ಬಂದು ಅವನ ಮೇಲೆ ಹಲವಾರು ಕಂಪ್ಲೇಂಟ್ಸ್ ಹೇಳುತ್ತಿದ್ದರು. ಯಾರು ಎಷ್ಟೇ ಹೇಳಿದ್ದರು, ನನಗೆ ಅವನೇ ಬೇಕು ಅಂತ ಡಿಸೈಡ್‌ ಆಗಿದ್ದೆ. ನಾನು ಪೀಕ್‌ನಲ್ಲಿದ್ದ ಸಮಯ, ಒಳ್ಳೊಳ್ಳೆ ಸಿನಿಮಾಗಳಿಲ್ಲಿ ನಟಿಸುವ ಅವಕಾಶಗಳು ಬರುತ್ತಿತ್ತು. ಅವರ ಪ್ರೀತಿ ಮುಂದೆ ನಂಗೆ ಬೇರೆ ಯಾವುದು ಕಾಣಿಸುತ್ತಿರಲಿಲ್ಲ. ದುಡಿಯಬೇಕು, ದುಡ್ಡು ಮಾಡಬೇಕು ಅಂತಲೂ ಅನಿಸಿರಲಿಲ್ಲ” ಎಂದು ಮಾಜಿ ಗಂಡನ ಬಗ್ಗೆ ಸೋನು ಗೌಡ ಮಾತನಾಡಿದ್ದಾರೆ.

ಡಿವೋರ್ಸ್‌ ಆಗಿದ್ದೇಕೆ?:
“ನಾನು ಮದುವೆಯಾದಾಗ ನನಗೆ 20 ವರ್ಷ ಮತ್ತು ಅವರಿಗೆ 29 ವರ್ಷ. ಅವರಿಗಾಗಿ ಫಿಲ್ಮ್‌ ಇಂಡಸ್ಟ್ರೀ ಬಿಟ್ಟೆ. ಅವರಿಗೆ ಜವಾಬ್ದಾರಿ ಇರುತ್ತಿರಲಿಲ್ಲ ಅನ್ನೋ ಕಾರಣಕ್ಕೆ ನಮ್ಮಿಬ್ಬರ ಮಧ್ಯೆ ಹಲವು ಬಾರಿ ಜಗಳ ಆಗುತ್ತಿತ್ತು. ನಾನು 2011ರಲ್ಲಿ ನನ್ನ ಮನೆ ಬಿಟ್ಟಿದ್ದೆ, ಆದಾಗ್ಯೂ 2016ರಲ್ಲಿ ಅವರು ಮನೆ ಮಾಡಿದ್ದರು. ಅವಾಗಲೇ ನಾನು ಅವರ ಮನೆಗೆ ಹೋಗಿದ್ದು. ಆ ಸಮಯದಲ್ಲಿ ನಾವು ಜಗಳವಾಡುತ್ತಿದ್ದರು ಜೀವನ ಸುಂದರವಾಗಿ ಸಾಗುತ್ತಿತ್ತು. ಆಗಲೇ ಕೆಟ್ಟ ಘಟನೆ ನಡೆದಿದ್ದು, ಎಲ್ಲರೂ ಅವರನ್ನ ದೂಷಿಸಿದ್ದರು. ಆದರೆ ಅವರಂತೂ ಈ ರೀತಿ ಮಾಡುವುದಕ್ಕೆ ಸಾಧ್ಯವೇ ಇಲ್ಲ ಅಂತಲೇ ನಾನು ಹೇಳುವುದು” ಎಂದು ಖಾಸಗಿ ಫೋಟೋ ಲೀಕ್‌ ಆಗಿದ್ದರೆ ಬಗ್ಗೆ ʻರಾಜೇಶ್‌ ಗೌಡʼ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸೋನು ಗೌಡ ಮಾತನಾಡಿದ್ದಾರೆ.

ನನ್ನಿಂದ ಅವನ ಲೈಫ್‌ ಹಾಳಾಯ್ತು?:
“ಖಾಸಗಿ ಫೋಟೋ ಲೀಕ್‌ ಆಗುತ್ತಿದ್ದಂತೆ, ಅವರ ಮನೆಯವರು ನಿನ್ನಿಂದಲೇ ನಮ್ಮ ಮನೆ ಮಾನ ಮರ್ಯಾದೆ ಹೋಯ್ತು ಅಂದಿದ್ದರು. ಅವನು ಕೂಡ ನಿನ್ನಿಂದ ನನ್ನ ಲೈಫ್‌ ಹಾಳಾಗೋಯ್ತು ಅಂದ. ನನ್ನಿಂದ ಯಾರ ಲೈಫ್‌ ಕೂಡ ಹಾಳಾಗುವುದು ಬೇಡ ಅಂತ ನಾನು ವಾಪಾಸ್‌ ನಮ್ಮ ಮನೆಗೆ ಬಂದು ಬಿಟ್ಟೆ. ನನ್ನ ಲಾಯರ್‌ ಇವರೇ ಫೋಟೋ ಲೀಕ್‌ ಮಾಡಿದ್ದು ಎಂದು ಜೀವನಾಂಶ ಕೇಳು ಅಂದಿದ್ದರು. ನನಗೆ ಅವನ ಕಡೆಯಿಂದ ಒಂದು ರೂಪಾಯಿ ಕೂಡ ಬೇಡ ಅಂತ ಡಿಸೈಡ್‌ ಆಗಿದ್ದೆ. ಅವನನ್ನು ಬಿಟ್ಟು ಇರುವುದಕ್ಕೆ ಆಗಲ್ಲ. ಡಿವೋರ್ಸ್‌ ತೆಗೆದುಕೊಳ್ಳುವುದು ಬೇಡ, ಸತ್ತು ಹೋಗಿ ಬಿಡೋಣ ಅಂತಲೂ ಯೋಚಿಸಿದ್ದೆ” ಎಂದ್ರು ಸೋನು ಗೌಡ.

ಮಾಜಿ ಗಂಡನೇ ಫೋಟೋ ಲೀಕ್‌ ಮಾಡಿದ್ರಾ?:
ಮುಂದುವರೆದು, “ನನ್ನ ಜೀವನದಲ್ಲಿ ಆ ಘಟನೆ ನಡೆಯಬಾರದಿತ್ತು. ನನ್ನ ಖಾಸಗಿ ಫೋಟೋಗಳು ಲೀಕ್‌ ಆದಮೇಲೆ ದೇವರನ್ನು ದ್ವೇಷಿಸೋಕೆ ಶುರು ಮಾಡಿದ್ದೆ. ಹೌದು.. ನಾವು ಖಾಸಗಿ ಫೋಟೋಗಳನ್ನು ಕ್ಲಿಕ್‌ ಮಾಡಿಕೊಂಡಿದ್ದೆವು. ಅದು ಮದುವೆ ಹೊಸತರಲ್ಲಿ ನಾವು ಕ್ಲಿಕ್‌ ಮಾಡಿದ್ದೆವು. ಅದನ್ನು ಡಿಲೀಟ್‌ ಕೂಡ ಮಾಡಿದ್ದೆವು. ನನ್ನ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌ ಮಾಡಿ ಅಲ್ಲಿಂದ ಆ ಫೋಟೋಗಳನ್ನು ಯಾರೋ ಲೀಕ್‌ ಮಾಡಿದ್ದರು. ನನ್ನ ಮಾಜಿ ಗಂಡನೇ ಲೀಕ್‌ ಮಾಡುವುದಾಗಿದಿದ್ದರೆ, ನಾವು ಅಷ್ಟು ವರ್ಷಗಳ ಕಾಲ ಎಷ್ಟೆಲ್ಲಾ ಜಗಳ ಮಾಡಿದ್ದೀವಿ ಆಗಲೇ ಲೀಕ್‌ ಮಾಡುಬೇಕಿತ್ತು. ಈ ಘಟನೆ ನಡೆದಿದ್ದು 2016ರಲ್ಲಿ ಮತ್ತು ನಾವು ಡಿವೋರ್ಸ್‌ ತೆಗೆದುಕೊಂಡಿದ್ದು 2017ರಲ್ಲಿ” ಎಂದು ಡಿವೋರ್ಸ್‌ ಬಗ್ಗೆ ಸೋನು ಗೌಡ ಮಾತನಾಡಿದ್ದಾರೆ.

ದುನಿಯಾ ಸೂರಿ ನಿರ್ದೇಶನದ ʻಇಂತಿ ನಿನ್ನ ಪ್ರೀತಿಯʼ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು, ಮೊದಲ ಸಿನಿಮಾದಿಂದಲೇ ನಟಿ ಸೋನು ಗೌಡ ಪ್ರೇಕ್ಷಕರ ಮನ ಗೆದ್ದರು. ಅಲ್ಲಿಂದ ಸೋನು ಗೌಡ ಅವರಿಗೆ ಬೇಡಿಕೆಯು ಹೆಚ್ಚಾಗಿತ್ತು. ನಂತರ ಹಲವಾರು ಸಿನಿಮಾಗಳಲ್ಲಿ ಮತ್ತು ಧಾರಾವಾಹಿಯಲ್ಲಿ ಸೋನು ಗೌಡ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *