Thu. Apr 3rd, 2025

Uppinangady: ತವರು ಮನೆಗೆ ಹೋದ ಪತ್ನಿ – ನೇಣುಬಿಗಿದುಕೊಂಡು ಪತಿ ಆತ್ಮಹತ್ಯೆ!!

ಉಪ್ಪಿನಂಗಡಿ:(ಮಾ.22) ನೇಣುಬಿಗಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೌಕ್ರಾಡಿ ಗ್ರಾಮದ ಪಡ್ಡಡ್ಕ ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: 🛑ಮಂಗಳೂರು: ನಕಲಿ ಐಡಿ, ಮೀಡಿಯಾ ಸ್ಟಿಕ್ಕರ್‌ ದುರ್ಬಳಕೆ ತಡೆಗೆ ಕ್ರಮ – ಪೊಲೀಸ್‌ ಕಮಿಷನರ್‌

ಪತ್ನಿ ತವರು ಮನೆಗೆ ಹೋದ ಬೇಸರದಿಂದ ಶೇಷಪ್ಪ (38) ಎಂಬಾತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಗುರುವಾರದಂದು ರಾತ್ರಿ ಮನೆಗೆ ಬಂದಾತ ತಾಯಿಯೊಂದಿಗೆ ಜಗಳವಾಡಿದ್ದ. ಈ ಸಂದರ್ಭ ಸ್ವರಕ್ಷಣೆಗಾಗಿ ತಾಯಿ ನೆರೆಮನೆಗೆ ಹೋಗಿದ್ದರು.

ಈ ವೇಳೆ ಮನೆಯ ಎದುರುಗಡೆಯ ಹಾಲ್‌ನಲ್ಲಿ ಅಡ್ಡಕ್ಕೆ ನೇಣು ಬಿಗಿದು ಈತ ಆತ್ಮಹತ್ಯೆ ಮಾಡಿದ್ದಾನೆ.


ಆತನ ಪತ್ನಿ ತವರು ಮನೆಗೆ ಹೋಗಿರುವ ಬೇಸರದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಈ ಕೃತ್ಯವೆಸಗಿರುವುದಾಗಿ ಮೃತರ ತಾಯಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *