ಬಂಟ್ವಾಳ:(ಮಾ.24) ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ಜ್ಯೋತಿರಾಜ್ ಅವರು ನಿಗದಿಪಡಿಸಿದಂತೆ ಬೆಳಿಗ್ಗೆ 10 ಗಂಟೆಗೆ ಪುರಾಣ ಪ್ರಸಿದ್ಧ ಕಾರಿಂಜೇಶ್ವರನ ಬೆಟ್ಟದ ಮೇಲೆ ಹತ್ತಲು ಆರಂಭಿಸಿದ್ದು ,ಕೇವಲ ಅರ್ಧ ತಾಸಿಗಿಂತಲೂ ಮೊದಲೇ ಈಶ್ವರನ ದೇವಾಲಯದ ಮುಂದೆ ಬಂದು ದೇವರಿಗೆ ನಮಸ್ಕರಿಸಿದ್ದಾರೆ.

ಇದನ್ನೂ ಓದಿ: ⭕ಬೆಳ್ತಂಗಡಿ: ಕೆಎಸ್ ಆರ್ ಟಿಸಿ ಬಸ್ & ಜೀಪ್ ನಡುವೆ ಭೀಕರ ಅಪಘಾತ
ನೆರೆದವರು ನೋಡುನೋಡುತ್ತಿದ್ದಂತೆ ಬೆಟ್ಟದ ಮೇಲೆ ಏರಿಯೇ ಬಿಟ್ಟಿದ್ದ. ನೋಡುಗರ ಮೈಜುಮ್ಮೆನಿಸುವ ರೀತಿಯಲ್ಲಿ ಸುಡು ಬಿಸಿಲಿಗೆ ಆತ ಬೆಟ್ಟವನ್ನು ಏರುವ ದೃಶ್ಯ ಕೆಲವರ ಕಣ್ಣುಗಳನ್ನು ಒದ್ದೆಯಾಗಿಸಿದೆ.


ಬಿಸಿಲಿನ ತಾಪಕ್ಕೆ ಕಾದು ಕಾದು ಸುಡುವ ಕಲ್ಲಿನ ಮೇಲೆ ಏರುವ ಆತನ ಸಾಹಸಕ್ಕೆ ಕಾರಿಂಜದಲ್ಲಿ ನೆರೆದ ಜನರಿಂದ ಓಹ್ ಎಂಬ ಉದ್ಗಾರ ಕೇಳಿ ಬಂತು.

ರಸ್ತೆ ಬದಿಯಲ್ಲಿ ಅನಾಥವಾಗಿರುವ ಮಕ್ಕಳಿಗೆ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಿ ಆ ಮೂಲಕ ಶಿಕ್ಷಣ ನೀಡುವ ಉದ್ದೇಶವನ್ನು ಹೊಂದಿದ್ದಾರೆ. ಕರ್ನಾಟಕದ ಬೇರೆ ಕಡೆಗಳಿಗೆ ತೆರಳಿ ಸಾಹಸ ಪ್ರದರ್ಶನ ಮಾಡುತ್ತಾ ಅದರಲ್ಲಿ ಬಂದ ಹಣವನ್ನು ಸ್ಪೋರ್ಟ್ಸ್ ಕ್ಲಬ್ ಸ್ಥಾಪನೆಗೆ ವಿನಿಯೋಗಿಸುವ ಕನಸು ಅವರದ್ದು ಆಗಿದೆ.

ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದ ಜ್ಯೋತಿರಾಜ್ ಅವರದು ಜೀವನ ಮುಳ್ಳಿನಹಾಸಿಗೆಯಾಗಿದೆ.
