Fri. Apr 4th, 2025

Bantwal: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪಲ್ಲಮಜಲು ಶ್ರೀ ರಾಮಾಂಜನೇಯ ಭಜನಾ ಮಂದಿರದ ಜೀರ್ಣೋದ್ದಾರಕ್ಕೆ ಮಂಜೂರಾದ ಅನುದಾನದ ಮಂಜೂರಾತಿ ಪತ್ರ ಹಸ್ತಾಂತರ

ಬಂಟ್ವಾಳ :(ಮಾ.24) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.)ಬಿ ಸಿ ಟ್ರಸ್ಟ್, ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ವಲಯದ ಬಂಟ್ವಾಳ ಮೂಡ ಕಾರ್ಯಕ್ಷೇತ್ರದ

ಇದನ್ನೂ ಓದಿ: ⭕FIR Against Rajat And Vinay Gowda :‌ ವಿನಯ್-ರಜತ್ ವಿರುದ್ಧ ಎಫ್‌ ಐ ಆರ್ ದಾಖಲು

ಪಲ್ಲಮಜಲು ಶ್ರೀ ರಾಮಾಂಜನೇಯ ಭಜನಾ ಮಂದಿರದ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜೂರಾದ ರೂ 2 ಲಕ್ಷ ಅನುದಾನ ಮೊತ್ತದ ಮಂಜೂರಾತಿ ಪತ್ರವನ್ನು

ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲ್ಲೂಕು ಯೋಜನಾಧಿಕಾರಿ ಜಯಾನಂದ.ಪಿ ರವರು ಭಜನಾ ಮಂಡಳಿಯ ಅಧ್ಯಕ್ಷರು ಗಣೇಶ್ ದಾಸ್ ಮತ್ತು ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು.


ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಬಿ. ಮೂಡ ಒಕ್ಕೂಟದ ಅಧ್ಯಕ್ಷರಾದ ಪ್ರತಿಭಾ ಶೆಟ್ಟಿ ಮತ್ತು ಪದಾಧಿಕಾರಿಗಳು, ಊರಿನ ಹಿರಿಯರು ಸೇಸಪ್ಪ ದಾಸಯ್ಯ, ಸೇವಾಪ್ರತಿನಿಧಿ ಆಶಾಲತಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *