Fri. Apr 4th, 2025

Belthangady: ” ಕರ್ನಾಟಕ ರಾಜ್ಯ ಪ್ಯಾರಾಮೆಡಿಕಲ್ ಬೋರ್ಡ್ ರ್‍ಯಾಂಕ್ ಪ್ರಕಟ ” – ಗೇರುಕಟ್ಟೆ ಮನ್ ಶರ್ ಪ್ಯಾರಾಮೆಡಿಕಲ್ ಕಾಲೇಜಿಗೆ DMIT ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಒಟ್ಟು 6 ರ್‍ಯಾಂಕ್

ಬೆಳ್ತಂಗಡಿ :(ಮಾ.24) ಸಯ್ಯದ್ ಉಮರ್ ಅಸ್ಸಖಾಫ್ ಮನ್ ಶರ್ ತಂಗಳ್ ರವರ ನೇತೃತ್ವದ ಮನ್ ಶರ್ ಪ್ಯಾರಾಮೆಡಿಕಲ್ ಕಾಲೇಜು ಕರ್ನಾಟಕ ರಾಜ್ಯ ಪ್ಯಾರಾಮೆಡಿಕಲ್ ಬೋರ್ಡ್, ಇತ್ತೀಜೆಗೆ ಪ್ರಕಟಗೊಳಿಸಿರುವ ರ್‍ಯಾಂಕ್ ಅನ್ನು DMIT (x-ray) ವಿಭಾಗದಲ್ಲಿ ರಾಜ್ಯಕ್ಕೆ ಮರಿಯಮ್ ಬೀವಿಯವರು ಪ್ರಥಮ ರ್‍ಯಾಂಕ್ ಅನ್ನು , B.Y.ಸಫೀನಾ ರಾಜ್ಯಕ್ಕೆ ದ್ವಿತೀಯ ರ್‍ಯಾಂಕ್ ಅನ್ನು, ಫಾತಿಮಾ ಸಫಾ ರಾಜ್ಯಕ್ಕೆ ತೃತೀಯ ರ್‍ಯಾಂಕ್ ಅನ್ನು ಕ್ರಮವಾಗಿ ಪಡೆದು ಅಪ್ರತಿಮ ಸಾಧನೆಯನ್ನು ಮಾಡಿ ಗ್ರಾಮೀಣ ಪ್ರದೇಶದ ಕಾಲೇಜಿನ ಹೆಸರನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.

ಇದನ್ನೂ ಓದಿ: ⭕Crime: ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಯುವತಿ ಪತ್ತೆ

ಅಲ್ಲದೆ DMLT ವಿಭಾಗಕ್ಕೆ ಅಫೀಫ 5ನೇ ರ್‍ಯಾಂಕ್, DMIT ವಿಭಾಗದಲ್ಲಿ ನಾಫಿಯ ಬಾನು 9ನೇ ರ್‍ಯಾಂಕ್
, ಹಾಗೂ DMIT ವಿಭಾಗದಲ್ಲಿ ರಿಹಾನಾಜ್ 10 ನೇ ರ್‍ಯಾಂಕ್ ಅನ್ನು ಪಡೆದಿದ್ದಾರೆ. ರ್‍ಯಾಂಕ್ ಗಳಿಸಿರುವ ವಿದ್ಯಾರ್ಥಿಗಳನ್ನು, ಇದರ ಹಿಂದೆ ಬೆನ್ನೆಲುಬಾಗಿ ನಿಂತ ಶಿಕ್ಷಕ ವೃಂದದವರನ್ನು,

ಪೋಷಕರನ್ನು ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ವರ್ಷಕ್ಕೆ ಪ್ರವೇಶ ಆರಂಭಗೊಂಡಿದ್ದು SSLC ಹಾಗೂ ಪಿಯುಸಿ ಮುಗಿಸುತ್ತಿರುವ ವಿದ್ಯಾರ್ಥಿಗಳ ಅರ್ಜಿ ಸ್ವೀಕರಿಸಲಾಗುವುದು ಎಂದು ಪ್ಯಾರಾ ಮೆಡಿಕಲ್ ಪ್ರಾಂಶುಪಾಲರಾದ ಹೈದ‌ರ್ ಮರ್ದಾಳ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆಯಲ್ಲಿ ಕಳೆದ 15 ವರ್ಷಗಳಿಂದ ವಿವಿಧ ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸಿ, ಗ್ರಾಮೀಣ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿರುತ್ತದೆ. ಮನ್ ಶರ್ ಸಂಸ್ಥೆ CG, UKG , SSLC & PU college commerce a science ಮುನ್ನಡೆಸುತ್ತಿದೆ.

ಸತತವಾಗಿ SSLC ಮತ್ತು PUC ಯಲ್ಲಿ ಹಲವು ಬಾರಿ 100% ಫಲಿತಾಂಶವನ್ನು ಪಡೆದಿರುತ್ತದೆ. 19ರಿಂದ ಬೆಳ್ತಂಗಡಿ ತಾಲೂಕಿನ ಏಕೈಕ ಪ್ಯಾರಾಮೆಡಿಕಲ್ ಕಾಲೇಜನ್ನು ಸ್ಥಾಪಿಸಿ ಇದೀಗ ರಾಜ್ಯಮಟ್ಟದಲ್ಲೇ ಪ್ರಥಮ, ದ್ವಿತೀಯ, ತೃತೀಯ ಹಾಗೂ ಒಟ್ಟು 6 ರ್‍ಯಾಂಕ್ ಗಳನ್ನು ಪಡೆದು ಬೆಳ್ತಂಗಡಿ ತಾಲೂಕಿಗೆ ಕೀರ್ತಿಯನ್ನು ತಂದಿರುತ್ತದೆ.

Leave a Reply

Your email address will not be published. Required fields are marked *