ಧರ್ಮಸ್ಥಳ:(ಮಾ.24) ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ 2 ಗೆ ಕನ್ಯಾಡಿ ಫ್ರೆಂಡ್ಸ್ ಕ್ಲಬ್ (ಕೆ ಎಫ್ ಸಿ) ಕನ್ಯಾಡಿ 2, ಇದರ ಅಧ್ಯಕ್ಷರು, ಕಾರ್ಯದರ್ಶಿ, ಪ್ರಧಾನ ಕ್ರೀಡಾ ಆಯೋಜಕರು,

ಇದನ್ನೂ ಓದಿ: ⭕ವಿಟ್ಲ: ಬಸ್ಸಿನ ಹಿಂಭಾಗಕ್ಕೆ ಕಾರು ಡಿಕ್ಕಿ
ಸರ್ವ ಸದಸ್ಯರು ಈ ವರ್ಷ ಆಯೋಜಿಸಿದ ಕೆಪಿಎಲ್ ಸೀಸನ್ -5 ಇದರ ಉಳಿದ ಹಣದಿಂದ ನೂತನ ಪ್ರಿಂಟರ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.



ಇದನ್ನು ಕೆ ಎಫ್ ಸಿಯ ಅಧ್ಯಕ್ಷರಾದ ನವೀನ್ ಸುವರ್ಣ ಮತ್ತು ಸದಸ್ಯರು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ನಂದ.ಕೆ, ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಪುಷ್ಪಾ ಎನ್ ರವರಿಗೆ ಹಸ್ತಾಂತರಿಸಿದರು.

