ಕಡಬ: (ಮಾ.24) ಶ್ರೀ ದುರ್ಗಾಂಬಾ ಕಲಾ ಸಂಗಮ ಶ್ರೀ ಕ್ಷೇತ್ರ ಶರವೂರು ಇದರ ವತಿಯಿಂದ ಮಾರ್ಚ್ 22 ರಂದು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಪ್ರಸಿದ್ಧ ಕಲಾವಿದರಿಂದ ಕೌಶಿಕ ಚರಿತ್ರೆ ತಾಳಮದ್ದಳೆ ಸೇವೆ ನಡೆಯಿತು.

ಇದನ್ನೂ ಓದಿ: ⭕ವಿಟ್ಲ: ಬಸ್ಸಿನ ಹಿಂಭಾಗಕ್ಕೆ ಕಾರು ಡಿಕ್ಕಿ
ಭಾಗವತರಾಗಿ ಮಹೇಶ್ ಕನ್ಯಾಡಿ, ಗೋಪಾಲ ಭಟ್ ನೈಮಿಷ,ಸುಬ್ರಹ್ಮಣ್ಯ ರಾವ್ ಶರವೂರು,ಕುಸುಮಾಕರ ಆಚಾರ್ಯ ಹಳೆನೇರೆಂಕಿ.
ಹಿಮ್ಮೇಳದಲ್ಲಿ ಪದ್ಮರಾಜ ತಂತ್ರಿ, ಭಾಸ್ಕರ ಕೋಳ್ಯೂರು, ಚಂದ್ರ ದೇವಾಡಿಗ, ಶಿಕಿನ್ ಶರ್ಮ ಶರವೂರು,ಚಕ್ರತಾಳದಲ್ಲಿ ಸುರೇಂದ್ರ ಭಟ್ ಕಳಸ ಮತ್ತು


ಅರ್ಥಧಾರಿಗಳಾಗಿ ದಿನೇಶ್ ಶೆಟ್ಟಿ ಕಾವಳಕಟ್ಟೆ(ಕೌಶಿಕ) ಗಣರಾಜ ಕುಂಬ್ಳೆ (ವಶಿಷ್ಟ ಮತ್ತು ದೇವೇಂದ್ರ ) ಗಣೇಶ್ ಶೆಟ್ಟಿ ಕನ್ನಡಿಕಟ್ಟೆ (ತ್ರಿಶಂಕು)ಅಂಬಾ ಪ್ರಸಾದ್ ಪಾತಾಳ (ವಾಸಿಷ್ಟರು ) ರಾಧಾಕೃಷ್ಣ ಕಲ್ಚಾರ್( ವಿಶ್ವಾಮಿತ್ರ ) ಭಾಗವಹಿಸಿದ್ದರು.


ಗೋಪಾಲಕೃಷ್ಣ ತೋಟಂತಿಲ, ವಿಠಲ ರೈ ಮತ್ತು ಮಕ್ಕಳು ಮನವಳಿಕೆ, ಶ್ರೀನಿವಾಸ ರಾವ್ ಮತ್ತು ಮಕ್ಕಳು ಶರವೂರು,
ಗಣರಾಜ ಕುಂಬ್ಳೆ, ನಾಗಪ್ಪ ಗೌಡ ಮರುವಂತಿಲ, ತಾರಾನಾಥ ರೈ ನಗ್ರಿ, ಸುಬ್ರಹ್ಮಣ್ಯ ರಾವ್ ಮತ್ತು ಮಕ್ಕಳು ಶರವೂರು ತಾಳಮದ್ದಳೆ ಸೇವಾರ್ಥಿಗಳಾಗಿದ್ದರು.
