Tue. Apr 8th, 2025

Ujire: ನವೀಕರಣಗೊಳ್ಳಲಿರುವ ಉಜಿರೆ ಸಂತ ಅಂತೋನಿ ಚರ್ಚ್ ನ ಮುಖ್ಯ ಗೋಪುರದ ಶಿಲಾನ್ಯಾಸ ಕಾರ್ಯಕ್ರಮ

ಉಜಿರೆ:(ಮಾ.24) ನವೀಕೃತಗೊಳ್ಳಲಿರುವ ಉಜಿರೆ ಸಂತ ಅಂತೋನಿ ಚರ್ಚ್ ಇದರ ಮುಖ್ಯ ಗೋಪುರದ ಶಿಲಾನ್ಯಾಸ ಕಾರ್ಯಕ್ರಮವು ಮಾ.23ರಂದು ನೆರವೇರಿಸಲಾಯಿತು.

ಇದನ್ನೂ ಓದಿ: 💠ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣೆಯ ಎಎಸ್‌ಐ ಆಗಿ ಬೆನ್ನಿಚ್ಚನ್ ವಿ.ಜೆ. ಅಧಿಕಾರ ಸ್ವೀಕಾರ

ಚರ್ಚ್ ನಲ್ಲಿ ಸ್ಥಳಾವಕಾಶ ನೀಗಿಸಲು ಮತ್ತು ಮೂಲ ಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಚರ್ಚ್ ನಲ್ಲಿ ನಿರ್ಮಾಣಗೊಂಡ ಕಟ್ಟಡದ ಆಶೀರ್ವಚನ ಮತ್ತು ಶಿಲಾನ್ಯಾಸವನ್ನು ಚರ್ಚ್ ನ ಪ್ರಧಾನ ಧರ್ಮಗುರು ಫಾ. ಅಬೆಲ್ ಲೋಬೊ ನೆರವೇರಿಸಿದರು.

ಈ ಸಂದರ್ಭದಲ್ಲಿ ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಫಾ. ವಿಜಯ್ ಲೋಬೊ, ಫಾ.ವಲೇರಿಯನ್ ಸಿಕ್ವೇರಾ, ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡೀಸ್, ಸಿ. ನ್ಯಾನ್ಸಿ ಡಯಸ್, ಕಾರ್ಯದರ್ಶಿ ಲೀಗೋರಿ ವಾಸ್, ಆರ್ಥಿಕ ಸಮಿತಿ ಸದಸ್ಯರು, ಪಾಲನಾ ಮಂಡಳಿ ಸದಸ್ಯರು, ಇಂಜಿನಿಯರ್ ಅಜಯ್ ಡಿಕುನ್ಹಾ ಮಡಂತ್ಯಾರು,

ಗುತ್ತಿಗೆದಾರ ಅನಿಲ್ ಡಿಸೋಜಾ, ಮಾಜಿ ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು, ಚರ್ಚ್ ನ ಗಣ್ಯರು, ಹಾಗೂ ಸಮಸ್ತ ಕ್ರೈಸ್ತ ಭಾಂದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಯೋಗದ ಸಂಯೋಜಕಿ ಲವೀನಾ ಫೆರ್ನಾಂಡೀಸ್ ಸ್ವಾಗತಿಸಿ , ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *