ಬೆಳ್ತಂಗಡಿ:(ಮಾ.25) ಸಿಯೋನ್ ಆಶ್ರಮ ಟ್ರಸ್ಟ್ (ರಿ.) ಗಂಡಿಬಾಗಿಲಿನಲ್ಲಿ ಮಾರ್ಚ್ 24 ರಂದು ಸಂಸ್ಥೆಯ ಟ್ರಸ್ಟಿ ಸದಸ್ಯರಾದ ಶ್ರೀಮತಿ ಮೇರಿ ಯು.ಪಿ. ಯವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲ(ರಿ.) ಇವರ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಿದರು.

ಇದನ್ನೂ ಓದಿ: ⭕ಪುತ್ತೂರು: ಹೃದಯಾಘಾತಕ್ಕೆ 27 ರ ಯುವಕ ಬಲಿ
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲ(ರಿ.) ಇದರ ಅಧ್ಯಕ್ಷರಾದ ಶ್ರೀಮತಿ ಸವಿತಾ ಜೈದೇವ್, ಕಾರ್ಯದರ್ಶಿ ಶ್ರೀಮತಿ ಆಶಾ ಸತೀಶ್, ಮಹಾ ಪೋಷಕರು ಶ್ರೀಮತಿ ಲೋಕೇಶ್ವರಿ ವಿನಯ್ ಚಂದ್ರ,


ಗೌರವ ಅಧ್ಯಕ್ಷರು ಶ್ರೀಮತಿ ಶಾಂತ ಬಂಗೇರ, ಖಜಾಂಚಿ ಶ್ರೀಮತಿ ಉಷಾ ಲಕ್ಷ್ಮಣ್ ಗೌಡ, ಸದಸ್ಯರುಗಳು, ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಯುತ ಡಾ. ಯು ಸಿ ಪೌಲೋಸ್, ಟ್ರಸ್ಟಿ ಸದಸ್ಯರುಗಳು, ಆಡಳಿತ ಮಂಡಳಿಯವರು, ಸಿಬ್ಬಂದಿ ವರ್ಗದವರು, ಮತ್ತು ಆಶ್ರಮ ನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು.


