ಬೆಳ್ತಂಗಡಿ:(ಮಾ.25) ಸುಪ್ರಜಾ ಕಲಾಕೇಂದ್ರ, ಕನ್ಯಾಡಿ ಹಾಗೂ ನಿನಾದ ಕ್ಲಾಸಿಕಲ್ ಮುಂಡ್ರುಪ್ಪಾಡಿ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಸಂಗೀತ ಆಸಕ್ತ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶ.

ಇದನ್ನೂ ಓದಿ: 💠ಉಜಿರೆ: ಎಸ್.ಡಿ.ಎಂ ರಸಾಯನಶಾಸ್ತ್ರ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಅಂತರ್‌ಕಾಲೇಜು ಫೆಸ್ಟ್
ಜೀ ಕನ್ನಡ ಸರಿಗಮಪ ಖ್ಯಾತಿಯ ಶ್ರೀಹರ್ಷ ಮೈಸೂರು ಮಾರ್ಗದರ್ಶನದಲ್ಲಿ “ಗಾನ ನಿನಾದ” ಎಪ್ರಿಲ್ 22 ಮತ್ತು ಎಪ್ರಿಲ್. 23 ರಂದು, 2 ದಿನದ ಸಂಗೀತ ಶಿಬಿರದ ತರಬೇತಿಯು ನಡೆಯಲಿದ್ದು, ಸಂಗೀತ ಆಸಕ್ತರಿಗೆ ಕಲಿಯುವ ಸುಲಭ ವಿಧಾನವನ್ನು ತಿಳಿಸಿಕೊಡಲಿದ್ದಾರೆ.

ತರಬೇತಿಯು ಕನ್ಯಾಡಿಯ ಸುಪ್ರಜಾ ಸಭಾಂಗಣದಲ್ಲಿ ನಡೆಯಲಿದೆ.
ವಯೋಮಿತಿ 8ರಿಂದ 13 ವರ್ಷ, 14 ರಿಂದ 25 ವರ್ಷ, 25 ವರ್ಷಕ್ಕಿಂತ ಮೇಲ್ಪಟ್ಟವರಿಗೆ (25 ಜನರಿಗೆ ಮಾತ್ರ ಅವಕಾಶ ) ಅವಕಾಶವಿದೆ.

ಭಾವಗೀತೆ ದೇವರ ನಾಮಗಳು , ಜಾನಪದ ಗೀತೆಗಳು , ರಂಗ ಗೀತೆಗಳು ತರಬೇತಿಯ ಕಲಿಕಾ ವಿಷಯಗಳಾಗಿವೆ.
ಜೊತೆಗೆ ಹಾಡನ್ನು ಕಲಿಯುವ ರೀತಿಯನ್ನು ಕೂಡ ಶಿಬಿರದಲ್ಲಿ ಹೇಳಿಕೊಡಲಾಗುತ್ತದೆ.

ಸಂಗೀತ ತರಬೇತಿ ಕಾರ್ಯಾಗಾರದ ನೋಂದಣಿಗಾಗಿ 8197236791 / 8748968791 / 9108181286 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.


