ಧರ್ಮಸ್ಥಳ :(ಮಾ.25) ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧವಾಗಿ ನಡೆಯುತ್ತಿರುವ ವ್ಯವಸ್ಥಿತ ಸಂಚು ವಿರೋಧಿಸಿ ಧರ್ಮಸ್ಥಳ ಗ್ರಾಮಸ್ಥರೇ ಸೇರಿಕೊಂಡು ಮಾರ್ಚ್ .27ರಂದು ಬೃಹತ್ ಸಮಾವೇಶ ನಡೆಸಲಿದ್ದೇವೆ ಎಂದು ಧರ್ಮಸ್ಥಳ ಗ್ರಾಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೇಶವ ಪಿ.ಬೆಳಾಲು ತಿಳಿಸಿದರು.

ಇದನ್ನೂ ಓದಿ: ⭕ದಾಂಡೇಲಿ : ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಗ್ಯಾಸ್ ಸಿಲಿಂಡರ್ ಸಾಗಾಟ ವಾಹನ
ಆ ದಿನ ಬೆಳಗ್ಗೆ ಅಣ್ಣಪ್ಪ ಬೆಟ್ಟದಲ್ಲಿ ಪ್ರಾರ್ಥನೆ ಮಾಡಿ ನಂತರ ಪ್ರಕೃತಿ ಚಿಕಿತ್ಸಾಲಯದ ಬಳಿ ಇರುವ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದರು. ಆ ದಿನ ಆ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಸ್ಫೋಟಕ ಮಾಹಿತಿ ಮತ್ತು ದಾಖಲೆ ನೀಡಲಿದ್ದೇವೆ ಎಂದರು.

ಧರ್ಮಸ್ಥಳ ಗ್ರಾಮಸ್ಥರು ಮಾತ್ರವಲ್ಲದೆ, ಧರ್ಮಸ್ಥಳ ದೇವಸ್ಥಾನದ ಅಭಿಮಾನಿಗಳು, ಭಕ್ತರು ಕೂಡ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದು. ಯಾವುದೇ ಕಾರಣಕ್ಕೂ ನಾವು ಧರ್ಮಸ್ಥಳದ ತೇಜೋವಧೆ ಸಹಿಸಲ್ಲ.



ಅವಹೇಳನ ಸಹಿಸಲ್ಲ. ಅವಹೇಳನ ಮಾಡುವವರ ವಿರುದ್ಧ ನಮ್ಮ ಹೋರಾಟ ಎಂದರು. ಈ ವೇಳೆ ಕಾರ್ಯದರ್ಶಿ ಧನಕೀರ್ತಿ ಆರಿಗ , ಪ್ರಭಾಕರ ಪೂಜಾರಿ, ನೀಲಕಂಠ ಶೆಟ್ಟಿ , ಅಜಿತ್ ಜೈನ್ , ಪ್ರೀತಂ ಧರ್ಮಸ್ಥಳ , ಶ್ರೀನಿವಾಸ್ ರಾವ್ , ಅಖಿಲೇಶ್ ಮತ್ತಿತರು ಉಪಸ್ಥಿತರಿದ್ದರು.
