ಬಂಟ್ವಾಳ:(ಮಾ.26) ಬಂಟ್ವಾಳ ತಾಲೂಕು, ಬಾಳ್ತಿಲ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಚಂದ್ರಶೇಖರ್ ಚೆಂಡೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಅಣ್ಣು ಪೂಜಾರಿಯವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದು

ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಕಾರ್ಯ ನಿರ್ವಹಿಸಿದರು. ಪಂ.ಪಿಡಿಓ, ಕಾರ್ಯದರ್ಶಿ,ಆರ್ ಐ ಸಹಕರಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಈ ಹಿಂದಿನ ಮೀಸಲಾತಿಯಂತೆ, ಹಿಂದುಳಿದ ವರ್ಗ ‘ಎ’ಯ ಚಂದ್ರಶೇಖರ್ ಸರ್ವಾನುಮತದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಶ್ರೀಮತಿ ರಂಜಿನಿ ಮುಂದುವರಿಯಲಿದ್ದಾರೆ.
ಚುನಾವಣಾಧಿಕಾರಿ ಆಯ್ಕೆಯನ್ನು ಘೋಷಿಸಿ, ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.



ಈ ಸಂದರ್ಭದಲ್ಲಿ ಬಾಳ್ತಿಲ ಗ್ರಾಮ ಪಂಚಾಯತ್ ಎಲ್ಲಾ 16 ಬಾಜಪ ಬೆಂಬಲಿತ ಸದಸ್ಯರು, ಪ್ರಮುಖರಾದ ಲೋಕಾನಂದ ಏಳ್ತಿಮಾರ್,ಸುರೇಶ್ ಶೆಟ್ಟಿ ಕಾಂದಿಲ, ರಾಮಣ್ಣ ಶೆಟ್ಟಿ,ಜಯಾನಂದ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದು, ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
