ಬೆಳ್ತಂಗಡಿ: (ಮಾ.26) ತುಳುನಾಡ ಸಂಸ್ಕೃತಿಯಲ್ಲಿ ಕಂಬಳಕ್ಕೆ ಅತ್ಯಂತ ಎತ್ತರದ ಸ್ಥಾನಮಾನವಿದೆ. ದೊಡ್ಡ ಮಟ್ಟದ ಅಭಿಮಾನಿ ಬಳಗ ಕೂಡ ಕಂಬಳಕ್ಕೆ ಇದೆ. ಬೆಳ್ತಂಗಡಿ ತಾಲೂಕಿನಲ್ಲಿ 32 ವರ್ಷಗಳಿಂದ ವೇಣೂರು-ಪೆರ್ಮುಡ ಕಂಬಳ ನಡೆಸಿಕೊಂಡು ಬರಲಾಗುತ್ತಿದೆ. ಈ ಕಂಬಳವನ್ನು ದಿ. ವಸಂತ್ ಬಂಗೇರ ಅವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದರು.

ಜೊತೆಗೆ ಬೇರೆ ಬೇರೆ ಅಧ್ಯಕ್ಷರುಗಳು ಇದರ ಮುಂದಾಳತ್ವ ವಹಿಸಿಕೊಂಡು ಉತ್ತಮ ರೀತಿಯಲ್ಲಿ ಕಂಬಳ ನಡೆಸಿಕೊಂಡು ಬಂದಿದ್ದಾರೆ. ಐತಿಹಾಸಿಕ ವೇಣೂರು -ಪೆರ್ಮುಡ ಕಂಬಳ ಈ ಬಾರಿ 32ನೇ ವರ್ಷದ ಕಂಬಳವನ್ನು ನಡೆಸುತ್ತಿದ್ದು, ಮಾರ್ಚ್ 30ರ ಭಾನುವಾರ ಕಂಬಳ ನಡೆಸಲು ತೀರ್ಮಾನಿಸಿದ್ದೇವೆ ಎಂದು ವೇಣೂರು ಕಂಬಳ ಸಮಿತಿಯ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು.
ಮಾರ್ಚ್ 30ರ ಬೆಳಗ್ಗೆ 8.30ಕ್ಕೆ ಸರಿಯಾಗಿ ಕಂಬಳದ ಉದ್ಘಾಟನೆ ನಡೆಯಲಿದೆ. ಅಳದಂಗಡಿ ಅರಮನೆಯ ತಿಮ್ಮಣ್ಣ ಅರಸರಾದ ಡಾ. ಪದ್ಮ ಪ್ರಸಾದ್ ಅಜಿಲರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಯುಗಾದಿ ದಿನದಂದು ಕಂಬಳ ನಡೆಯುತ್ತಿರುವುದರಿಂದ ಈ ದಿನ ರೈತರಿಗೂ ವಿಶೇಷವಾಗಲಿದೆ ಎಂದರು.
ಎಂದರು . ಇದೊಂದು ಸೌಹಾರ್ದತೆಯ ಕಂಬಳ. ಎಲ್ಲ ಧರ್ಮ ಗುರುಗಳು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು. ಅಲ್ಲದೇ ಸರ್ಕಾರದ ಸಚಿವರುಗಳು, ನಿಮಗಳ ಅಧ್ಯಕ್ಷರುಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಪಾರ್ಕಿಂಗ್ ಗಾಗಿ ಒಂದೂವರೆ ಎಕರೆ ಜಾಗ..!
ಈ ಬಾರಿ ವಾಹನ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಸರಿ ಸುಮಾರು ಒಂದೂವರೆ ಎಕರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಎಷ್ಟೇ ವಾಹನ ಬಂದರೂ ಯಾವುದೇ ಟ್ರಾಫಿಕ್ ಸಮಸ್ಯೆ ಆಗೋದಿಲ್ಲ ಎಂದು ರಕ್ಷಿತ್ ಶಿವರಾಂ ಮಾಹಿತಿ ನೀಡಿದರು.

ಕಂಬಳದಲ್ಲ್ಲಿ ಏನೆಲ್ಲಾ ಇದೆ..!
ಈ ಬಾರಿಯ ಕಂಬಳಕ್ಕೆ ಹೊಸ ಸ್ಪರ್ಶವನ್ನು ಕಂಬಳ ಸಮಿತಿ ನೀಡಿದ್ದು ಟಿಕೆಟ್ ಆಧಾರಿತ ಬೋಟಿಂಗ್ ವ್ಯವಸ್ಥೆ ಇರಲಿದೆ. ಜೊತೆಗೆ ಜನರನ್ನು ಆಕರ್ಷಿಸಲು ಕಾರಂಜಿ ವ್ಯವಸ್ಥೆ ಮಾಡಲಾಗುತ್ತೆ. ಜೊತೆಗೆ ಹೋಟೆಲ್ ವ್ಯವಸ್ಥೆ. ಗ್ರಾಮೀಣ ಖಾದ್ಯಗಳು ಸಿಗುವ ಮಳಿಗೆಗಳ ವ್ಯವಸ್ಥೆ ಇರಲಿದೆ ಎಂದು ರಕ್ಷಿತ್ ಶಿವರಾಂ ತಿಳಿಸಿದರು.
ಕಂಬಳದ ತಂಡಕ್ಕೆ ಉಡುಗೊರೆ…!
ಕಂಬಳ ತಂಡಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅವರಿಗೆ ಉಡುಗೊರೆ ನೀಡಲು ನಿರ್ಧರಿಸಲಾಗಿದೆ. ರಕ್ಷಿತ್ ಶಿವರಾಂ ಅವರು ಉಡುಗೊರೆಯನ್ನು ವೈಯಕ್ತಿಕವಾಗಿ ನೀಡುತ್ತೇವೆ ಎಂದರು.

ಈ ಸಂದರ್ಭ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ .ಎಚ್ ಕೋಟ್ಯಾನ್, ಕಾರ್ಯಾಧ್ಯಕ್ಷರಾದ ಶೇಖರ್ ಕುಕ್ಕೇಡಿ, ಪ್ರವೀಣ್ ಫರ್ನಾಂಡಿಸ್ ಹಳ್ಳಿಮನೆ , ಗೋಪಾಲ್ ಪೂಜಾರಿ ಪೆರ್ಮುದ, ಸ್ಟೀವನ್ ಮೋನಿಸ್ ಮತ್ತಿತರು ಉಪಸ್ಥಿತರಿದ್ದರು.


