Tue. Apr 8th, 2025

Belthangady: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಮೋಡಾ ವೀಲ್ ಚೇರ್ ವಿತರಣೆ

ಬೆಳ್ತಂಗಡಿ:(ಮಾ.26) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕಿನ,ಉಜಿರೆ ವಲಯದ, ಮಾಯಾ ಕಾರ್ಯಕ್ಷೇತ್ರದ ನಾಗಕಲ್ಲು ದುಗ್ಗಪ್ಪ ಗೌಡರವರಿಗೆ ನಡೆದಾಡಲು ಕಷ್ಟ ಸಾಧ್ಯವಾಗಿದ್ದು ಇವರಿಗೆ ಸಮುದಾಯ ಅಭಿವೃದ್ಧಿ ವಿಭಾಗದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಕಮೋಡ ವೀಲ್ ಚೇರ್ ಗೆ ಬೇಡಿಕೆ ನೀಡಿದ್ದು,

ಇದನ್ನೂ ಓದಿ: ☘ಉಜಿರೆ: ಎಸ್.ಡಿ.ಎಂ ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆ

ಸದ್ರಿ ಬೇಡಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯ ಖಾವಂದರು ಮಂಜೂರು ಮಾಡಿದ್ದು, ಮಾಯಾ ಒಕ್ಕೂಟದ ಮಾಜಿ ಅಧ್ಯಕ್ಷರಾದ ಶಿವಪ್ಪ ಗೌಡ, ವಲಯ ಮೇಲ್ವಿಚಾರಕಿ ವನಿತಾ, ಬೆಳಾಲು ಒಕ್ಕೂಟದ ಅಧ್ಯಕ್ಷರಾದ ರತ್ನಾಕರ ಆಚಾರ್ಯರವರು ಕಮೋಡ್ ಚೇರ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾಯಾ ಒಕ್ಕೂಟದ ಪದಾಧಿಕಾರಿಯವರಾದ ಸಂಜೀವ ಗೌಡ, ರಾಮಚಂದ್ರ, ಭಾರತಿ, ಸೇವಾಪ್ರತಿನಿಧಿ ಪ್ರಭಾ, ಸೇವಾಪ್ರತಿನಿಧಿ ತಾರನಾಥ, ಒಕ್ಕೂಟದ ಪದಾಧಿಕಾರಿಗಳು ಮತ್ತು ಮನೆಯವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *