Sun. Apr 6th, 2025

Kundapura Viral: ಜಸ್ಟ್‌ ಪಾಸಾದ್ರೆ ಸಾಕು, ಇದಕ್ಕಿಂತ ಕಮ್ಮಿ ಅಂಕ ಬೇಡ – ದೈವಕ್ಕೆ ಚೀಟಿ ಮುಖಾಂತರ ಮನವಿಯಿಟ್ಟ ವಿದ್ಯಾರ್ಥಿ

ಕುಂದಾಪುರ (ಮಾ. 26): ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಭಯ ಒಂದು ಕಡೆಯಾದ್ರೆ, ರಿಸಲ್ಟ್‌ ಸಮಯದಲ್ಲಿ ಅಯ್ಯೋ ಎಷ್ಟು ಮಾರ್ಕ್‌ ಬರುತ್ತೋ, ಮನೆಯಲ್ಲಿ ಇನ್ನೆಷ್ಟು ಬೈಗುಳ ತಿನ್ನೋಕೆ ಇರುತ್ತೋ ಎಂದು ಭಯಪಟ್ಟುಕೊಳ್ಳುತ್ತಾರೆ. ಇದೇ ಭಯದಲ್ಲಿ ರಿಸಲ್ಟ್‌ ಸಮಯದಲ್ಲಿ ವಿದ್ಯಾರ್ಥಿಗಳು ಫಸ್ಟ್‌ ಕ್ಲಾಸ್‌ ಮಾರ್ಕ್‌ ಬರುವಂತೆ ಮಾಡಪ್ಪಾ ದೇವ್ರೇ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ.

ಇದನ್ನೂ ಓದಿ: ☘ಬಂಟ್ವಾಳ : ಜವಾಹರ್ ಬಾಲ್ ಮಂಚ್ ಇದರ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಸಂಯೋಜಕರಾಗಿ ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್ ಆಯ್ಕೆ

ಅಂತದ್ರಲ್ಲಿ ಇಲ್ಲೊಬ್ಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ಪಾಸ್‌ ಮಾಡಿಸುವಂತೆ ದೇವರಿಗೆ ಚೀಟಿಯನ್ನೇ ಬರೆದಿದ್ದಾನೆ. ಪರೀಕ್ಷೆಯಲ್ಲಿ ನನಗೆ ಇಂತಿಷ್ಟು ಅಂಕ ಬರಬೇಕೆಂದು ಚೀಟಿ ಬರೆದು ಅದನ್ನು ಹುಂಡಿಗೆ ಹಾಕಿ ದೈವ ದೇವರಲ್ಲಿ ಜಸ್ಟ್‌ ಪಾಸ್‌ ಮಾಡಿಸುವಂತೆ ಮನವಿಯನ್ನು ಮಾಡಿದ್ದಾನೆ. ಇದೀಗ ಈ ಚೀಟಿ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ವಿದ್ಯಾರ್ಥಿಯೋರ್ವ ಚೀಟಿ ಬರೆದು ನನಗೆ ಇಂತಿಷ್ಟು ಅಂಕ ಬರುವಂತೆ ಮಾಡಿ ಪಾಸ್‌ ಮಾಡಿಸು ಅಂತ ಚೀಟಿ ಬರೆದು ದೈವಕ್ಕೆ ಕೋರಿಕೆಯಿಟ್ಟಿದ್ದಾನೆ. ಕುಂದಾಪುರದ ಹೊಳಮಗ್ಗಿ ಹೊರ ಬೊಬ್ಬರ್ಯ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಈ ಚೀಟಿ ಪತ್ತೆಯಾಗಿದೆ. ದೈವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುವ ವೇಳೆ ವಿದ್ಯಾರ್ಥಿ ಜಸ್ಟ್‌ ಪಾಸ್‌ ಮಾಡುವಂತೆ ಕೋರಿದ್ದ ಚೀಟಿ ಲಭ್ಯವಾಗಿದ್ದು, ಇದರ ಫೋಟೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಈ ಚೀಟಿಯಲ್ಲಿ “ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್‌ ಬರಬೇಕು ದೇವರೇ ಹೊರ ಬೊಬ್ಬರ್ಯ; ಗಣಿತ- 39, 38, 37, 36, ಇಂಗ್ಲೀಷ್-‌ 39, 38, 37, ಕನ್ನಡ- 40, 39 ವಿಜ್ಞಾನ- 39, 38, ಹಿಂದಿ- 40, 39, ಸಮಾಜ ವಿಜ್ಞಾನ- 38, 37 ಮತ್ತೆ ಇದಕ್ಕಿಂತ ಕಡಿಮೆ ಅಂಕ ಬೇಡ ದೇವರೇ” ಎಂದು ಪರೀಕ್ಷೆಯಲ್ಲಿ ಜಸ್ಟ್‌ ಪಾಸ್‌ ಮಾಡಿಸುವಂತೆ ಮನವಿ ಮಾಡಿದ್ದಾನೆ.

Leave a Reply

Your email address will not be published. Required fields are marked *