Thu. Apr 3rd, 2025

ಮಂಗಳೂರು ವಿ. ವಿ ಘಟಿಕೋತ್ಸವ ಹಣದ ಆಮಿಷಕ್ಕೆ ಮಾರಾಟವಾಗದಿರಲಿ ಗೌರವ ಡಾಕ್ಟರೇಟ್ ಪದವಿ -ಎಬಿವಿಪಿ ಮಂಗಳೂರು ಎಚ್ಚರಿಕೆ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಘಟಿಕೋತ್ಸವದ ಸಂದರ್ಭದಲ್ಲಿ ‘ ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ ‘ ಪ್ರಕಾರ ಶಿಕ್ಷಣ ಕ್ಷೇತ್ರಕ್ಕೆ, ಕಲಾಕ್ಷೇತ್ರಕ್ಕೆ, ಸಾಹಿತ್ಯ ಕ್ಷೇತ್ರಕ್ಕೆ, ಇಲ್ಲವೇ ವಿಜ್ಞಾನ ಅಥವಾ ಯಾವುದೇ ಬೌದ್ಧಿಕ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದವರನ್ನು ಗುರುತಿಸಿ ಅವರುಗಳಿಗೆ ‘ ಗೌರವ ಡಾಕ್ಟರೇಟ್ ‘ ನೀಡಬೇಕೆಂಬುವುದು ಸಾರ್ವಜನಿಕ ನಿರೀಕ್ಷೆ ಹಾಗೂ ಗೌರವನೀಯ ಕ್ರಮ.

ಆದರೆ ಮಂಗಳೂರು ವಿಶ್ವವಿದ್ಯಾಲಯವು ಇತ್ತೀಚಿನ ವರ್ಷಗಳಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಈ ಮೇಲೆ ತಿಳಿಸಲಾದ ಮಾನದಂಡಗಳಿಗೆ ಭಿನ್ನವಾಗಿ ಧನವಂತ ಉದ್ದಿಮೆದಾರರಿಗೆ, ವ್ಯಾಪಾರಸ್ಥರಿಗೆ ಮತ್ತಿತರ ಪ್ರಭಾವಿ ವ್ಯಕ್ತಿಗಳಿಗೆ ನೀಡುತ್ತಾ ಬಂದಿದ್ದು ತನ್ನ ಹೆಸರಿಗೆ ಅಪಕ್ಯಾತಿಯನ್ನು ಹಾಗೂ ‘ಗೌರವ ಡಾಕ್ಟರೇಟ್ ‘ಪದವಿಗೆ ಅಗೌರವವನ್ನು ತಂದುಕೊಳ್ಳುತ್ತಿರುವುದು ದುರಾದೃಷ್ಟಕರ ವಿವಿಯ ಈ ಪ್ರವೃತ್ತಿಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಬಲವಾಗಿ ಖಂಡಿಸುತ್ತದೆ.

ಇದೀಗ ಈ ಸಾಲಿನಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಾದರೂ ಯಾವುದೇ ಪ್ರಭಾವಕ್ಕೆ ಧನದ ಆಮೀಷಕ್ಕೆ, ರಾಜಕೀಯ ಒತ್ತಡಕ್ಕೆ, ಕಮಿಷನ್ ಏಜೆಂಟ್ಗಳ ತಂತ್ರಗಾರಿಕೆಗೆ ಬಲಿಯಾಗದೆ ಕೇವಲ ವ್ಯಕ್ತಿಗಳ ಶೈಕ್ಷಣಿಕ, ಬೌದ್ಧಿಕ, ಸಾಹಿತ್ಯ, ಕಲಾ ಸಾಧನೆಗಳನ್ನು ಮಾತ್ರ ಆಧಾರವಾಗಿರಿಸಿಕೊಂಡು ‘ಗೌರವ ಡಾಕ್ಟರೇಟ್ ‘ಪದವಿಯನ್ನು ಪ್ರಧಾನಿಸಿ ವಿಶ್ವವಿದ್ಯಾಲಯ ಉಪಕುಲಪತಿ ಹಾಗೂ ಸಿಂಡಿಕೇಟ್ ಸದಸ್ಯ ಮಂಡಳಿ ತನ್ನ ಗೌರವವನ್ನು ಉಳಿಸಿಕೊಳ್ಳುವುದು ಮತ್ತು ಗೌರವ ಡಾಕ್ಟರೇಟ್ ಪದವಿ ಅಪಹಾಸ್ಯಕ್ಕೆ ಈಡಾಗದಂತೆ ಮಾಡುವುದೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಶಿಸುವುದು.

ಅಲ್ಲದೆ,ಈ ಪದವಿಯನ್ನು ಸತ್ಪಾತ್ರರಿಗೆ ನೀಡಲು ಸಾಧ್ಯವಾಗದೆ ಇದ್ದರೆ ಈ ಹಿಂದೆ ಕೆಲವು ಬಾರಿ ಮಾಡಿದಂತೆ ಯಾರಿಗೂ ಅದನ್ನು ನೀಡದೆ ಅದರ ಘನತೆ ಹಾಗೂ ವಿವಿಯ ಘನತೆ ಘನತೆ ಗೌರವವನ್ನು ಉಳಿಸಿಕೊಳ್ಳುವುದೇ ಶ್ರೇಯಸ್ಕರವೆಂದು ವಿದ್ಯಾರ್ಥಿ ಪರಿಷತ್ ಎಚ್ಚರಿಸುವುದು ಎಂದು ಎಬಿವಿಪಿ ಮಂಗಳೂರು ಜಿಲ್ಲಾ ಸಂಚಾಲಕ್ ಸುವಿತ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *