ಧರ್ಮಸ್ಥಳ:(ಮಾ.27) ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳ ಗ್ರಾಮಸ್ಥರು ಅಂಗಡಿ ಮುಂಗಟ್ಟು ಬಂದ್ ಮಾಡಿ ಅಣ್ಣಪ್ಪ ಬೆಟ್ಟದ ಮುಂದೆ ಮೌನ ಪ್ರಾರ್ಥನೆ ನಡೆಸಿದ್ದಾರೆ.

ಇದನ್ನೂ ಓದಿ: 🛑ಬೆಳ್ತಂಗಡಿ: ಸಂಶಯಾಸ್ಪದ ರೀತಿಯಲ್ಲಿ ಲೈನ್ ಮ್ಯಾನ್ ಸುಧಾಕರ ಮೃತದೇಹ ಪತ್ತೆ!!
ಅಣ್ಣಪ್ಪ ಸ್ವಾಮಿ ಮುಂದೆ ಪ್ರಾರ್ಥಿಸಿ ಎಲ್ಲವೂ ದೇವರಿಗೆ ಸಲ್ಲಿಕೆಯಾಗಲಿ ಎಂದರು. ಪ್ರಾರ್ಥನೆ ಬಳಿಕ ತೆಂಗಿನಕಾಯಿ ಹೊಡೆದು ಗ್ರಾಮಸ್ಥರು ಪ್ರಾರ್ಥಿಸಿದರು. ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗಿಯಾಗಿದ್ದರು.

ಸ್ವಯಂಪ್ರೇರಿತ ಬಂದ್ .!
ಗ್ರಾಮಸ್ಥರು ಅಂಗಡಿ ಮುಂಗಟ್ಟು ಬಂದ್ ಮಾಡಿದ್ದರು. ಆಟೋ, ವಾಹನಗಳೂ ಕೂಡ ನಿಲ್ಲಿಸಲಾಗಿತ್ತು ಹೀಗಾಗಿ ಧರ್ಮಸ್ಥಳ ರಥಬೀದಿ ಬಿಕೋ ಎನ್ನುತ್ತಿತ್ತು.



