Mon. Apr 7th, 2025

Ujire: ಎಸ್.ಡಿ.ಎಂ ಸಂಖ್ಯಾಶಾಸ್ತ್ರ ಕಾರ್ಯಾಗಾರ

ಉಜಿರೆ (ಮಾ.27): ಉನ್ನತ ಶಿಕ್ಷಣದ ಎಲ್ಲಾ ಸೌಲಭ್ಯ, ಅವಕಾಶಗಳನ್ನು ವಿದ್ಯಾರ್ಥಿ ಜೀವನದಲ್ಲಿ ಪೂರಕವಾಗಿಸಿಕೊಂಡು ಮುನ್ನಡೆ ಸಾಧಿಸಬೇಕು ಎಂದು ಉದ್ಯಮಿ ಅನುಷಾ ಕಾಮತ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: 🛑ಬೆಳ್ತಂಗಡಿ: ದೊಡ್ಡಮ್ಮನ ಮಗನಿಂದಲೇ ಬಾಲಕಿಗೆ ಲೈಂಗಿಕ ಕಿರುಕುಳ

ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಂಖ್ಯಾಶಾಸ್ತ್ರ ಮತ್ತು ಸಂಶೋಧನಾ ವಿಭಾಗವು ‘ಪೈಥಾನ್ ಫಂಡಮೆಂಟಲ್ಸ್ : ಫ್ರಮ್ ಬೇಸಿಕ್ ಟು ಲಾಜಿಕ್ ಬಿಲ್ಡಿಂಗ್’ ಕುರಿತ ಎಂಬ ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾರ್ಯಾಗಾರವನ್ನು ಉದ್ಘಾಟಿಸಿ ಎಸ್.ಡಿ.ಎಂ ಸೊಸೈಟಿಯ ಶೈಕ್ಷಣಿಕ ಸಲಹೆಗಾರರಾದ ಶಶಿಶೇಖರ್ ಎನ್ ಕಾಕತ್ಕರ್ ಮಾತನಾಡಿದರು. ಸಂಶೋಧನೆಯಲ್ಲಿ ಮತ್ತು ನೈಜಜೀವನದ ಅನೇಕ ಕ್ಷೇತ್ರಗಳಲ್ಲಿ ಸಂಖ್ಯಾಶಾಸ್ತ್ರದ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥ ಪಿ, ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸವಿತಾಕುಮಾರಿ, ಎಸ್. ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ, ಸಹಾಯಕ ಪ್ರಾಧ್ಯಾಪಕಿ ಮಂಜುಳಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *