ವಿಟ್ಲ :(ಮಾ.27)ಬಂಟ್ವಾಳ ತಾಲೂಕು ಕೇಪು ಗ್ರಾಮದ ಬೊಳ್ನಾಡು ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಇದೀಗ ಭರಣಿ ಮಹೋತ್ಸವವು ಹಲವು ಅಪೂವ೯ ಆಶ್ಚಯ೯ಗಳೊಂದಿಗೆ ಮುನ್ನಡೆಯುತ್ತಿದೆ.

ಇದನ್ನೂ ಓದಿ: ☘ಉಜಿರೆ: ಎಸ್.ಡಿ.ಎಂ ಕಾಲೇಜಿನಲ್ಲಿ ಎಸ್ಪರಾಂಜ ಫೆಸ್ಟಿವಲ್
ಮಾರ್ಚ್ 25 ರಂದು ನಡೆದ ಉತ್ಸವದಲ್ಲಿ ಎಳೆಯ ಮಕ್ಕಳನ್ನು ಶೃಂಗರಿಸಿ ಭಗವತೀ ದೇವತೆಯ ಸಂಕಲ್ಪದಲ್ಲಿ ಕಂಚಿಲ್ ಸೇವೆ ನಡೆಸಿರುವುದು ವಿಶೇಷ ನಡವಳಿಯಾಗಿರುತ್ತದೆ. ಕರಾವಳಿ ಜಿಲ್ಲೆಗಳ ಆಯ್ದ ಭಗವತೀ ಕ್ಷೇತ್ರಗಳಲ್ಲಿ ಶತಮಾನಗಳಿಂದ ನಡೆದು ಬರುತ್ತಿರುವ ಈ ಸಂಕಲ್ಪವು ಅನುಕರಣೀಯವಾದುದು ಎಂದು ಸಮಾಜ ಚಿಂತಕರ ಅಭಿಪ್ರಾಯವಾಗಿರುತ್ತದೆ.


ಭರಣಿ ನಕ್ಷತ್ರದ ಒಂದು ಮಗುವನ್ನು ಆಯ್ಕೆ ಮಾಡಿ “ಮುಹೂತ೯ ಮಗು” ವಾಗಿ ಸ್ವೀಕರಿಸಿದ್ದು ಭಗವತೀ ಸಂಕಲ್ಪದಲ್ಲಿ ನೇಮ ನಿಷ್ಟೆಗೆ ಒಳಪಡಿಸಿ ದೇವಸ್ಥಾನ ಪಕ್ಕದಲ್ಲಿ ಹೆತ್ತವರೊಂದಿಗೆ ಉಳಿಸಿಕೊಂಡಿರುವರು.ದೇವಾಲಯದ ಆರಾಧನೆಯೊಂದಿಗೆ ಭಗವತೀ ಎಂಬ ಗೌರವದಿಂದ ನೋಡಿಕೊಳ್ಳುತ್ತಿರುವರು ಎಂದು ಈ ವಿಚಾರವಾಗಿ ಕಣ್ಣ ಕಲೆಕಾರ ಹಾಗೂ ಪುರುಶೋತ್ತಮ ಗುರಿಕಾರರು ಮಾಹಿತಿಗಳನ್ನು ನೀಡಿದರು.

ಸಮಾಜದ ದುಸ್ಥಿತಿಗಳ ನಿವಾರಣೆಗೆ “ಮಕ್ಕಳೇ ದೇವರು” ಹಾಗೂ
“ತಾಯಿಯೇ ಮೊದಲ ಗುರು”ಎಂಬ ಸಂಕಲ್ಪದ ಆರಾಧನೆಯ ಕಾಯ೯ಗಳು ಹಾಗೂ ಪ್ರಸಾದ ವಿತರಣೆಗಳು ಸಾವ೯ತ್ರಿಕ ಆಚರಣೆಯಾಗುವ ಅಗತ್ಯವಿದೆ. ಜಾತಿನೀತಿಯನ್ನು ಬದಿಗಿಟ್ಟು ಪರಿಷ್ಕೃತ ಹೆಜ್ಜೆಗಳು ಮುಂದಿನ ದಿನಗಳಲ್ಲಿ ಅಗತ್ಯವಿದೆ.ಇದು ಭಾರತೀಯ ಸಮಾಜ ಜೀವನ ಹಾಗೂ ಶಿಕ್ಷಣ ಸಂಶೋಧನಾ ಸಂಸ್ಥೆಯ ಸಮಾಜ ಚಿಂತಕರಾದ ಅಡ್ವಳರ ಕರೆಯಾಗಿರುತ್ತದೆ.

ಕೃಷ್ಣ ಎನ್. ಉಚ್ಚಿಲ್ ಇವರ ಮಹಾದಾನದಿಂದ ಮೊದಲ್ಗೊಂಡು ಭಕ್ತಾದಿ ಮಹನೀಯರ ಸೇವೆ ಹಾಗೂ ತ್ಯಾಗದ ದ್ಯೋತಕವಾಗಿ ಶ್ರೀ ಕ್ಷೇತ್ರವು ಮಹಾ ಕಾರಣೀಕದ ಸನ್ನಿಧಿಯಾಗಿ ಮೂಡಿ ಬಂದಿದೆ. ಸುಮಾರು 600 ವಷ೯ಗಳ ಹಿಂದೆಯೆ ಸಂಪೂಣ೯ ತೆರೆಮರೆಗೆ ತಳ್ಳಲ್ಪಟ್ಟ ಶ್ರೀ ಕ್ಷೇತ್ರವು ಇದೀಗ ಪುನಶ್ಚೇತನಗೊಂಡು ಭಜಕರ ಇಷ್ಟಾಥ೯ ಸಿದ್ಧಿಯ ಪವಿತ್ರ ತಾಣವಾಗಿ ಬೆಳೆಯುತ್ತಿರುವುದು ಶುಭಲಕ್ಷಣವಾಗಿರುತ್ತದೆ.
