ಕಾರ್ಕಳ:(ಮಾ.28) ಬಾವಿಗೆ ಹಾರಿ ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮ ಮಂಜರಬೆಟ್ಟು ಎಂಬಲ್ಲಿ ಮಾರ್ಚ್ 27 ರಂದು ನಡೆದಿದೆ. ಎಳ್ಳಾರೆ ಗ್ರಾಮ ಮಂಜರಬೆಟ್ಟು ನಿವಾಸಿ ರಮೇಶ ಇವರ ಮಗ ತೇಜಸ್ ಮೃತ ಬಾಲಕ.

ಇದನ್ನೂ ಓದಿ: ಮೊಗ್ರು : ಅಲೆಕ್ಕಿ ಶ್ರೀ ರಾಮ ಸೇವಾ ಟ್ರಸ್ಟ್ (ರಿ.)ಇದರ ಪೋಷಕರ ಹಾಗೂ ಶಿಕ್ಷಕರ ಚಿಂತನಾ ಸಭೆ
ತೇಜಸ್ 10 ನೇ ತರಗತಿಯಲ್ಲಿ ಕೆಲವು ವಿಷಯಗಳಲ್ಲಿ ಫೇಲ್ ಆಗಿ, ನಂತರ ಅಜೆಕಾರಿನಲ್ಲಿ ಟ್ಯೂಷನ್ ಪಡೆದು ಎಸ್.ಎಸ್‌ಎಲ್.ಸಿ ಸಪ್ಲಿಮೆಂಟರಿ ಪರೀಕ್ಷೆ ಬರೆದಿದ್ದ.



ಅದರಲ್ಲಿ ಕೂಡ ಅನುತ್ತೀರ್ಣಗೊಂಡ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ತೆರೆದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

