Fri. Apr 4th, 2025

Ujire: ಎಸ್‌.ಡಿ.ಎಂ ಕಾಲೇಜಿನಲ್ಲಿ ಸಿನಿಮಾಟೋಗ್ರಾಫಿಕ್ ಲೈಟಿಂಗ್ ಕಾರ್ಯಾಗಾರ

ಉಜಿರೆ (ಮಾ.28): ಸಿನಿಮಾ ಕಥೆಗಳನ್ನು ಆಸಕ್ತಿದಾಯಕವಾಗಿಸುವಲ್ಲಿ ಸಿನಿಮಾಟೋಗ್ರಾಫಿಯ ಬೆಳಕಿನ ಬಳಕೆಯ ತಂತ್ರಜ್ಞಾನ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಬೆಂಗಳೂರು ಪಿಕ್ಚರ್‌ಕ್ರಾಫ್ಟ್ ಸ್ಟುಡಿಯೋದ ಸಂಸ್ಥಾಪಕ, ಸಿನಿಮಾಟೋಗ್ರಾಫಿ ತಂತ್ರಜ್ಞ ಪ್ರದೀಪ್ ರೆಡ್ಡಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ⭕ಮಂಗಳೂರು : ಕಾಲುಗಳನ್ನು ಕಟ್ಟಿ ಅಮಾನುಷವಾಗಿ ಅಕ್ರಮ ಗೋ ಸಾಗಾಟ

ಎಸ್.ಡಿ.ಎಂ ಕಾಲೇಜಿನ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ಬಿ.ವೊಕ್ ವಿಭಾಗವು ಗುರುವಾರ ಸಿನಿಮಾಟೋಗ್ರಾಫಿಕ್ ಲೈಟಿಂಗ್ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಕಥೆಗಳನ್ನು ಸಿನಿಮಾ ಮೂಲಕ ನಿರೂಪಿಸುವಾಗ ಬೆಳಕಿನ ಪಾತ್ರ ವಿಶೇಷವಾದದ್ದು. ಬೆಳಕು ಕಥೆಗಳನ್ನು ಹೇಳಬಲ್ಲದು. ಬೆಳಕನ್ನು ಬಳಸುವ ಜಾಣ್ಮೆಯ ಸೃಜನಾತ್ಮಕತೆಯು ಕಥನದ ಸಂದರ್ಭ, ಸನ್ನಿವೇಶಗಳ ಪ್ರಭಾವವನ್ನು ವಿಭಿನ್ನವಾಗಿ ದಾಟಿಸುತ್ತದೆ ಎಂದರು. ಚಲನಚಿತ್ರಗಳಿಗೆ ಜೀವ ತುಂಬಬಲ್ಲ ಮಾಯಜಾಲವೇ ಬೆಳಕು. ಬೆಳಕನ್ನು ಎರಡು ತಂತ್ರಗಳಾಗಿ ವಿಂಗಡಿಸಲಾಗಿದೆ,

ಬೆಳಕಿನ ಅಧ್ಯಯನ ಮತ್ತು ಸೃಜನಾತ್ಮಕ ಬೆಳಕಿನ ಸೃಷ್ಟಿ. ಕ್ರಿಯಾತ್ಮಕ ಹಾಗೂ ರಚನಾತ್ಮಕ ದೃಶ್ಯಗಳ ಸೃಷ್ಟಿಗೆ ಬೆಳಕು ಒಂದು ಉತ್ತಮ ಸಾಧನ. ವಿಭಿನ್ನ ಸಂದರ್ಭಗಳಲ್ಲಿ ವೀಕ್ಷಕರನ್ನು ತಲ್ಲೀನಗೊಳಿಸುವ ಶಕ್ತಿ ಬೆಳಕಿಗಿದೆ, ಸ್ವಂತಿಕೆಯನ್ನು ಬಳಸಿಕೊಂಡು ನೆರಳು ಬೆಳಕಿನ ಜೊತೆಗೆ ಆಟವಾಡಿದಾಗ ಉತ್ತಮ ನಿರ್ದೇಶಕತ್ವ ರೂಪುಗೊಳ್ಳಲು ಸಾಧ್ಯ ಎಂದರು.

ವಿದ್ಯಾರ್ಥಿಗಳಿಗೆ ಸಿನಿಮಾಟೋಗ್ರಾಫಿ ಕುರಿತು ಪ್ರಾಯೋಗಿಕ ತರಬೇತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ಬಿ.ವೊಕ್ ವಿಭಾಗದ ತೃತೀಯ ವರ್ಷದ ಲೋಹಿತ್. ಎಸ್.ಕಳೆಂಜ ಮತ್ತು ತಂಡದ ನಿರ್ದೇಶನದಲ್ಲಿ ಮೂಡಿಬಂದ ಅವ್ಯಾಹತ ಕಿರುಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದರು.


ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ಬಿ.ವೊಕ್ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆದಿತ್ಯ.ಬಿ. ಮಾಡಳ್ಳಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *