Fri. Apr 4th, 2025

Ujire: ಎಸ್.ಡಿ.ಎಂ ಗೃಹವಿಜ್ಞಾನಿ ವಿಭಾಗದಿಂದ ಆಹಾರಮೇಳ

ಉಜಿರೆ (ಮಾ.28): ರುಚಿಕರ ಅಡುಗೆ ಸಿದ್ಧಪಡಿಸುವ ಕೌಶಲ್ಯವನ್ನು ಸತತ ಅಭ್ಯಾಸದಿಂದ ರೂಢಿಸಿಕೊಳ್ಳಬೇಕು ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ವಿಜ್ಞಾನ ನಿಕಾಯದ ಡೀನ್ ಡಾ. ಸವಿತಾಕುಮಾರಿ ಅವರು ಹೇಳಿದರು.

ಇದನ್ನೂ ಓದಿ: ⭕ಕಾರ್ಕಳ: ಬಾವಿಗೆ ಹಾರಿ ಬಾಲಕ ಆತ್ಮಹತ್ಯೆ!!

ಉಜಿರೆ ಎಸ್.ಡಿ.ಎಂ. ಕಾಲೇಜಿನ ಗೃಹವಿಜ್ಞಾನ ವಿಭಾಗವು ಗುರುವಾರ ಆಯೋಜಿಸಲಾಗಿದ್ದ ಆಹಾರ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಡುಗೆ ಎಂಬುದು ಒಂದು ಕಲೆ, ಅಮ್ಮನ ಅಡುಗೆಯಂತೆ ರುಚಿಕರವಾಗಿ ಆಹಾರ ಸಿದ್ಧಪಡಿಸುವುದಕ್ಕೆ ಸಾಧ್ಯವಾಗುವುದು ನಿರಂತರ ಅಭ್ಯಾಸದಿಂದ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಅಡುಗೆ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗೃಹವಿಜ್ಞಾನ ವಿಭಾಗವು ವಿಶಿಷ್ಟ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸ್ವಾದಿಷ್ಟ ಅಡುಗೆ ಸಿದ್ಧಪಡಿಸುವ ಕೌಶಲ್ಯವನ್ನು ಅನಾವರಣಗೊಳಿಸಿವೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಬಳಸಿಕೊಂಡು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ತಂಪು ಪಾನೀಯ, ಹಣ್ಣು ಹಂಪಲು, ಚುರುಮುರಿ, ಸಲಾಡ್ ಮತ್ತಿತರ ತಿನಿಸುಗಳೊಂದಿಗೆ ವಿವಿಧ ಆಹಾರ ಮಳಿಗೆಗಳು ಇದ್ದವು. ಈ ಸಂದರ್ಭದಲ್ಲಿ ಗೃಹವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶೋಭಾ ಎಸ್, ಸಹಾಯಕ ಪ್ರಾಧ್ಯಾಪಕಿ ಐಶ್ವರ್ಯ ಬಿ.ಕೆ ಉಪಸ್ಥಿತರಿದ್ದರು. ತೃತೀಯ ಬಿ.ಎ ವಿದ್ಯಾರ್ಥಿ ಮನಸ್ವಿನಿ ಕೆ ಎಸ್ ಸ್ವಾಗತಿಸಿದರು. ಪ್ರಥಮ ಬಿಎ ವಿದ್ಯಾರ್ಥಿ ವಿಕಾಸ್ ವಂದಿಸಿದರು.

Leave a Reply

Your email address will not be published. Required fields are marked *