ಬೆಳ್ತಂಗಡಿ :(ಮಾ.29) ಲಯನ್ಸ್ ಕ್ಲಬ್ ಬೆಳ್ತಂಗಡಿ ಮತ್ತು ಬೆಳ್ತಂಗಡಿ ಪೊಲೀಸರ ನೇತ್ತೃತ್ವದಲ್ಲಿ ಬೆಳ್ತಂಗಡಿಯ ಮುಂಭಾಗ ಮೆಗಾ ANTI – DRUG ವಾಕಥಾನ್ ಗೆ ಚಾಲನೆ ದೊರಕಿತು. ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗುರುವಾಯನಕೆರೆ , ಬ್ಯಾಂಕ್ ಆಫ್ ಬರೋಡಾ ಬೆಳ್ತಂಗಡಿ ,ವೈಭವ್ ಹಾರ್ಡ್ ವೇರ್ ಗುರುವಾಯನಕೆರೆ, ವಾಣಿ ಶಿಕ್ಷಣ ಸಂಸ್ಥೆ, ಸೇಂಟ್ ಮೇರಿಸ್ ಶಾಲೆ ಲಾಯಿಲ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ, ಎಕ್ಸೆಲ್ ಪಿಯು ಕಾಲೇಜು ಗುರುವಾಯನಕೆರೆ ,

ಇದನ್ನೂ ಓದಿ: 🌐Ghibli Style Image: ಇಂಟರ್ನೆಟ್ನಲ್ಲಿ ಸಂಚಲನ ಸೃಷ್ಟಿಸಿದ ಘಿಬ್ಲಿ ಇಮೇಜ್
ಪ್ರಸನ್ನ ಆಯುರ್ವೇದ ಕಾಲೇಜು ಲಾಯಿಲ, ಸುದ್ದಿ ಉದಯ ವಾರ ಪತ್ರಿಕೆ, ರೂಪಾ ಕ್ಯಾಟರರ್ಸ್, ರಿವಾ ವಾಟರ್ , ಮೀಡಿಯಾ ಕ್ಲಬ್ ಬೆಳ್ತಂಗಡಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಸರಕಾರಿ ಇಲಾಖೆಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆದಿದ್ದು. ಚಾಲನೆಗೂ ಮುನ್ನ ಮಾತನಾಡಿದ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ.

ನಮ್ಮ ದೇಶದಲ್ಲಿ ಶೇ. 60ರಷ್ಟು ಯುವಜನತೆ ಇದೆ. ಯುವ ಜನತೆ ನಮ್ಮ ಸಂಪತ್ತು. ಈ ಯುವ ಜನತೆ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ತಡೆಗಟ್ಟುವುದು ಸಮಾಜದ ಜವಾಬ್ಧಾರಿಯಾಗಿದೆ ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬಳಿಕ ಮಾತನಾಡಿದ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಡ್ರಗ್ಸ್ ನಮ್ಮ ಯೋಚನಾ ಲಹರಿಯನ್ನು ಹಾಳುಗೆಡವುತ್ತೆ. ಡ್ರಗ್ಸ್ ಸೇವನೆಯಿಂದ ಅನೇಕ ಅಪರಾಧಗಳು ನಡೆಯುತ್ತೆ ಹೀಗಾಗಿ ನಮ್ಮ ಮನಸ್ಸು, ಬುದ್ದಿಗಳನ್ನು ಇಂತಹ ದುಶ್ಚಟದ ಕೈಗೆ ನೀಡಬಾರದು ಎಂದರು.

ಬಳಿಕ ಹೀಲಿಯಂ ಬಲೂನನ್ನು ಗಾಳಿಯಲ್ಲಿ ತೂರುವ ಮೂಲಕ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಲಾಯಿತು. ಬಳಿಕ ಸಾವಿರಾರು ಸಂಖ್ಯೆಯಲ್ಲಿ ಇದ್ದ ವಿದ್ಯಾರ್ಥಿಗಳು ನಡಿಗೆ ಮೂಲಕ ಮಾದಕ ವ್ಯಸನದ ವಿರುದ್ಧ ಘೋಷಣೆಗಳನ್ನು ಹೇಳುತ್ತ ಸಾಗಿದರು. ಜಾಥಾ ಬೆಳ್ತಂಗಡಿಯಿಂದ ಹೊರಟು ಸಂತೆಕಟ್ಟೆಯಾಗಿ ಬೆಳ್ತಂಗಡಿ ಕಲಾ ಕೇಂದ್ರಕ್ಕೆ ತಲುಪಿತು.

ಕಲಾ ಕೇಂದ್ರದಲ್ಲಿ ಸಭೆ…!
ಬಳಿಕ ಬೆಳ್ತಂಗಡಿಯಲ್ಲಿರುವ ಶ್ರೀ ಮಂಜುನಾಥ ಕಲಾಕೇಂದ್ರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಐಪಿಎಸ್ ಮತ್ತು ಡಿವೈಎಸ್ ಪಿ ವಿಜಯ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಯತೀಶ್ ಎನ್ ಐಪಿಎಸ್, ವಿದ್ಯಾರ್ಥಿಗಳ ಮೂಲಕ ಮಾದಕ ವ್ಯಸನ ವಿರೋಧದ ಸಂದೇಶವನ್ನು ಸಾರ್ವಜನಿಕರಿಗೆ ನೀಡಿದ್ದೀರಿ ಇದೊಂದು ಒಳ್ಳೆಯ ಕಾರ್ಯಕ್ರಮ ಎಂದರು. ಹತ್ತು ವರ್ಷಗಳ ಹಿಂದೆ ಈ ಡ್ರಗ್ಸ್ ಎನ್ನುವ ಪಿಡುಗು ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಇತ್ತು. ಆದರೆ ಈ ಡ್ರಗ್ಸ್ ಎನ್ನುವ ಪಿಡುಗು ಹಳ್ಳಿಗಳಿಗೆ ತಲುಪಿದೆ. ಶ್ರೀಮಂತ ಮಾತ್ರವಲ್ಲ, ಬಡವರು ಈ ಡ್ರಗ್ಸ್ ಗೆ ದಾಸರಾಗುತ್ತಿದ್ದಾರೆ. ಉತ್ತಮ ಓದುವ ವಿದ್ಯಾರ್ಥಿಗಳು ಈ ಚಟಕ್ಕೆ ಬಿದ್ದು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು. ಯುವ ಜನತೆಗೆ ಏನಾದರು ಮಾಡುವ ಹುಮ್ಮಸ್ಸು ಇರುತ್ತದೆ.

ಆ ಹುಮ್ಮಸ್ಸಿನ ಸಮಯದಲ್ಲಿ ಕೆಲವು ಸಂದರ್ಭ ಇಂತಹ ಮಾದಕ ವ್ಯಸನಗಳು ಯುವ ಪೀಳಿಗೆಯನ್ನು ಆಕರ್ಷಿಸೋದು ಸಾಮಾನ್ಯ ಆದರೆ ನಾವು ದುಶ್ಚಟದಿಂದ ದೂರ ಇರುವ ಹಾಗೇ ಆಗಬೇಕು. ದುಶ್ಚಟ ಆಕರ್ಷಿಸುವ ವೇಳೆ ಉತ್ತಮ ಕೆಲಸಗಳಿಗೆ ನಾವು ಗಮನ ಕೊಡಬೇಕು. ಆಟ ಆಡೋದು, ಪುಸ್ತಕ ಓದುವುದು ಹೀಗೆ ವಿವಿಧ ಚಟುವಟಿಕೆಗಳನ್ನು ಮಾಡಬೇಕು ಎಂದರು. ಬಳಿಕ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಯತೀಶ್ ಎನ್ ಅವರು, ಮುಂದೆ ನಾವು ಯಾವುದೇ ಮಾದಕ ವ್ಯಸನಕ್ಕೆ ತುತ್ತಾಗಬಾರದದು ಎಂದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿ, ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಸುಬ್ಬಾಪೂರ್ ಮಠ, ಲಯನ್ಸ್ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ಲ.ದೇವದಾಸ್ ಶೆಟ್ಟಿ, ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ, ವಲಯಾಧ್ಯಕ್ಷ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.
