ಬೆಂಗಳೂರು (ಮಾ. 29): ಇತ್ತೀಚಿನ ದಿನಗಳಲ್ಲಿ AI ತಂತ್ರಜ್ಞಾನವು ಇಂಟರ್ನೆಟ್ ಅನ್ನು ಪ್ರಾಬಲ್ಯಗೊಳಿಸುತ್ತಿದೆ. ಇದರಲ್ಲಿ ಹೊಸದೇನೋ ಬಂದು ಟ್ರೆಂಡ್ ಸೃಷ್ಟಿಸುತ್ತಿರುತ್ತದೆ.

ಇದನ್ನೂ ಓದಿ: ⭕ಕುಂದಾಪುರ: ಕಾರು ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ
ಬಳಿಕ ಅದನ್ನು ಎಲ್ಲರೂ ಅನುಸರಿಸುತ್ತಾರೆ ಮತ್ತು ಸಾಮಾಜಿಕ ಮಾಧ್ಯಮ ಪೂರ್ತಿ ಅದರದ್ದೇ ಹವಾ. ಅದರಂತೆ ಈಗ ಇಂಟರ್ನೆಟ್ನಲ್ಲಿ ಘಿಬ್ಲಿ ಸ್ಟೈಲ್ ಇಮೇಜ್ ಧೂಳೆಬ್ಬಿಸುತ್ತಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸ್ಟುಡಿಯೋ ಘಿಬ್ಲಿ ಶೈಲಿಯ ಫೋಟೋಗಳು ಚರ್ಚೆಯ ವಿಷಯವಾಗಿದೆ.

ಎಲ್ಲರೂ ಘಿಬ್ಲಿ ಶೈಲಿಯ ಚಿತ್ರವನ್ನು ರಚಿಸುತ್ತಿದ್ದಾರೆ. ChatGPT ಯ ಈ ಹೊಸ ಇಮೇಜ್ ಸೃಷ್ಟಿ ಸಾಧನವು ಲಕ್ಷಾಂತರ ಮೊಬೈಲ್ ಬಳಕೆದಾರರಿಗೆ ಹೊಸ ಅನುಭವವನ್ನು ನೀಡಿದೆ.

ChatGPT ಯ ಈ ವೈಶಿಷ್ಟ್ಯದ ಮೂಲಕ, ಬಳಕೆದಾರರು ತಮ್ಮ ನೆಚ್ಚಿನ ಫೋಟೋಗಳು, ಸಿನಿಮಾ ನಟರ ಫೋಟೋಗಳು ಅಥವಾ ಜನಪ್ರಿಯ ಮೀಮ್‌ಗಳನ್ನು ಸ್ಟುಡಿಯೋ ಘಿಬ್ಲಿ ತರಹದ ಚಿತ್ರಗಳಾಗಿ ಪರಿವರ್ತಿಸುತ್ತಿದ್ದಾರೆ.

ಈ ಜನರು ಮಾತ್ರ ChatGPT ಮೂಲಕ ಘಿಬ್ಲಿ ಚಿತ್ರಗಳನ್ನು ರಚಿಸಬಹುದು:
ChatGPT ಯ ಈ ಹೊಸ ವೈಶಿಷ್ಟ್ಯವನ್ನು GPT-4 ಟರ್ಬೊದಲ್ಲಿ ಕಾರ್ಯನಿರ್ವಹಿಸುವ ChatGPT ಪ್ಲಸ್ ಹೊಂದಿರುವವರು ಮತ್ತು DALL-E ಮೂಲಕ ಮಾತ್ರ ಬಳಸಬಹುದು. ಆದಾಗ್ಯೂ, ಹೊಸ ಬಳಕೆದಾರರು ಈ AI ಇಮೇಜ್ ಜನರೇಟರ್ ಅನ್ನು ಬಳಸಲು ಬಯಸಿದರೆ, ಈ ಸೌಲಭ್ಯವನ್ನು ಪಡೆಯಲು ಅವರು ತಿಂಗಳಿಗೆ $20 (ಸುಮಾರು ರೂ. 1,712) ಪಾವತಿಸಬೇಕಾಗುತ್ತದೆ.

ChatGPT ನಲ್ಲಿ ಸ್ಟುಡಿಯೋ ಘಿಬ್ಲಿ ತರಹದ ಚಿತ್ರಗಳನ್ನು ರಚಿಸಲು, ನೀವು ‘ಇದನ್ನು ಘಿಬ್ಲಿ ಶೈಲಿಯ ಫೋಟೋವನ್ನಾಗಿ ಪರಿವರ್ತಿಸಬಹುದೇ?’, ‘ಸ್ಟುಡಿಯೋ ಘಿಬ್ಲಿ’ ಎಂದು ಟೈಪ್ ಮಾಡಬಹುದು.
