ಉಡುಪಿ: (ಮಾ.29) ಪ್ರೀತಿ ಕುರುಡು ಅದಕ್ಕೆ ಕಣ್ಣು ಕಿವಿ ಇರೋದಿಲ್ಲ ಅಂತಾರೆ. ಪ್ರೀತಿ ಮಾಯೆ ಹುಷಾರು ಅಂತ ತಿಳಿದವರು ಹೇಳಿದ್ದಾರೆ.
ಈ ನಡುವೆ ರಾತ್ರಿ ಕಂಡ ಬಾವಿಗೆ ಯುವತಿ ಹಗಲಲ್ಲೇ ಬಿದ್ದ ಘಟನೆ ಉಡುಪಿಯಲ್ಲಿ ನಡೆದಿದೆ. ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿನಿಯನ್ನು ನಟೋರಿಯಸ್ ಗರುಡ ಗ್ಯಾಂಗ್ ಯುವಕ ಅಪಹರಿಸಿರುವ ಆರೋಪ ಕೇಳಿಬಂದಿದೆ. ಪೊಲೀಸರ ವಶದಲ್ಲಿರುವ ಮಗಳನ್ನು ಒಂದು ಬಾರಿ ನಮ್ಮ ಮುಂದೆ ತಂದು ನಿಲ್ಲಿಸಿ ಎಂದು ಪೋಷಕರು ಬೇಡುತ್ತಿದ್ದಾರೆ.

ಇದನ್ನೂ ಓದಿ: 🔴ಧರ್ಮಸ್ಥಳ: ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ.ಶಾಲೆಯಲ್ಲಿ
ಮಗಳನ್ನು ನಮ್ಮ ಮುಂದೆ ತಂದು ನಿಲ್ಲಿಸಿ ಅಂತ ಆಟೋ ಚಾಲಕ ಅಪ್ಪ, ನರ್ಸ್ ಅಮ್ಮ ಅಕ್ಷರಶಃ ಬೇಡುತ್ತಿದ್ದಾರೆ. ದಂಪತಿ ಉಡುಪಿಯ ಕೊಡವೂರಿನವರು. ಫೋಟೋದಲ್ಲಿರುವ ಈಕೆ ಈ ದಂಪತಿಯ ಪುತ್ರಿ ಜೀನಾ. ಕಳೆದೊಂದು ವಾರದಿಂದ ಈಕೆ ಕಣ್ಮರೆಯಾಗಿದ್ದಾಳೆ. ಉಡುಪಿಯ ಕರಂಬಳ್ಳಿಯ ನಿವಾಸಿ ಮಹಮ್ಮದ್ ಅಕ್ರಂ, ಜೀನಾಳನ್ನು ಅಪಹರಿಸಿದ್ದಾನೆ ಎಂದು ಪೊಲೀಸರಿಗೆ ದೂರಿದ್ದಾರೆ. ಮಾರ್ಚ್ 20ಕ್ಕೆ ಯುವತಿ ಕಾಲೇಜಿನಿಂದ ಮನೆಗೆ ವಾಪಸ್ ಸಾಗುತ್ತಿದ್ದಾಗ ಕುಟ್ಟಿಕಟ್ಟೆ ಎಂಬಲ್ಲಿ ಜೀನಾಳನ್ನು ಬಸ್ಸಿನಿಂದ ಇಳಿಸಿ ಹಾರಿಸಿಕೊಂಡು ಹೋಗಿದ್ದಾನೆ ಎಂದು ತಾಯಿ ದೂರಿದ್ದಾರೆ.


ಸೇಡು ತೀರಿಸಲು ಅಪಹರಣ ಮಾಡಿದ್ನಾ ಅಕ್ರಂ?
ಜೀನಾ 9ನೇ ತರಗತಿಯಲ್ಲಿರುವಾಗಲೇ ಅಕ್ರಂ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ. ಆ ಸಂದರ್ಭ ಚಿನ್ನದ ಸರ ಕಳ್ಳತನ, ಪೋಕ್ಸೋ ಕೇಸ್ ದಾಖಲಾಗಿತ್ತು. ಆ ನಂತರ ನಿರಂತರ ಸಂಪರ್ಕದಲ್ಲಿದ್ದು, ಆ ಸೇಡನ್ನು ಈಗ ತೀರಿಸುತ್ತಿದ್ದಾನಂತೆ. ಮಾರ್ಚ್ 19ರಂದು ಯುವತಿ ಕಣ್ಮರೆಯಾಗಿದ್ದಾಳೆ. ಇದಕ್ಕೂ ಒಂದು ದಿನ ಮೊದಲು ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಅಕ್ರಂ ಮತ್ತು ಜೀನಾ ಮದುವೆ ನೋಂದಣಿ ಮಾಡಿಕೊಂಡಿದ್ದರು. ಈ ವಿಚಾರ ಪೋಷಕರಿಗೆ ಮರುದಿನ ಗೊತ್ತಾಗಿದೆ. ಇದು ತಿಳಿಯುತ್ತಿದ್ದಂತೆ, ಯುವತಿಯನ್ನು ಅಕ್ರಂ ಅಪಹರಿಸಿದ್ದಾನೆ ಎಂದು ಪೋಷಕರು ದೂರಿದ್ದಾರೆ.

ಇದೊಂದು ಪ್ರೀ ಪ್ಲ್ಯಾನ್ಡ್ ಕಿಡ್ನಾಪ್ , ಯುವತಿಯ ಅಶ್ಲೀಲ ಫೋಟೋ ವಿಡಿಯೋಗಳು ಇಟ್ಟುಕೊಂಡು ಬ್ಲಾಕ್ ಮೇಲ್ , ಇಬ್ಬರು ವಯಸ್ಕರು, ಏನೂ ಮಾಡೋಕ್ಕಾಗಲ್ಲ ಎಂದು ಕೈ ತೊಳೆದುಕೊಂಡು ಪೊಲೀಸರು:
ಯುವಕ ಮತ್ತು ಯುವತಿ ಮೇಜರ್ ಆಗಿದ್ದಾರೆ, ಹಾಗಾಗಿ ಅವರು ಸ್ವತಂತ್ರರು, ನಮಗೇನು ಮಾಡಲು ಬರುವುದಿಲ್ಲ ಕಣ್ಮರೆಯಾಗಿಲ್ಲ. ಅವರಿಬ್ಬರು ಸೇಫ್ ಎಂದು ಪೊಲೀಸರು ಕೈತೊಳೆದುಕೊಂಡಿದ್ದಾರಂತೆ. ಈ ಬಗ್ಗೆ ಉಡುಪಿ ನಗರ ಠಾಣೆ, ಎಸ್ ಪಿಯನ್ನು ಭೇಟಿ ಮಾಡಿದ ಪೋಷಕರಿಗೆ ಯಾವುದೇ ರೀತಿಯ ಸಹಾಯ ಸಿಕ್ಕಿಲ್ಲ. ಅಪಹರಣ ಹಿಂದೆ ಗರುಡ ಗ್ಯಾಂಗ್ ಇದೆ. ಫೋಟೋ ವೀಡಿಯೋ ಇಟ್ಟುಕೊಂಡು ಯುವತಿಯನ್ನು ಪೀಡಿಸಿ, ಬೆದರಿಸಿ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ ಎಂಬುದು ಪೋಷಕರ ದೂರಾಗಿದೆ.

ಹೇಬಿಯಸ್ ಕಾರ್ಪಸ್ ಹಾಕಿರುವ ಕಾರಣ ಜೀನಾ ಮತ್ತು ಅಕ್ರಂ ಬೆಂಗಳೂರು ಹೈಕೋರ್ಟಿಗೆ ಪೊಲೀಸರ ಜೊತೆ ಹಾಜರಾಗಿದ್ದಾರೆ. ಅವಧಿ ಮುಗಿದ ಕಾರಣ ಕೋರ್ಟು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ. ನಮ್ಮ ಮಗಳು ಮರ್ಯಾದೆಗೆ ಅಂಜಿದ್ದಾಳೆ. ಯುವಕನನ್ನು ವಿಚಾರಣೆಗೆ ಒಳಪಡಿಸಬೇಕು, ಇದರ ಹಿಂದಿರುವ ಜಾಲವನ್ನು ಪತ್ತೆಹಚ್ಚಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಗೃಹ ಸಚಿವರನ್ನು ಆಗ್ರಹಿಸಿದ್ದಾರೆ.
