ಉಜಿರೆ(ಮಾ.29): ಉಜಿರೆಯ ಶ್ರೀ ಧ. ಮಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಮೂರು ದಿನಗಳ ಬೇಸಿಗೆ ಶಿಬಿರವನ್ನು ಎಸ್.ಡಿ.ಎಂ ಕಲಾ ಕೇಂದ್ರದ ನೃತ್ಯ ಸಂಯೋಜಕರಾದ ವಿನ್ಯಾಸ್ ಇವರು ಉದ್ಘಾಟಿಸಿ “ಸೀಮಿತ ಸಮಯದಲ್ಲಿ ನವೀನ ಹಾಗು ಸೃಜನಾತ್ಮಕ ವಿಷಯಗಳನ್ನು ಕಲಿಯಿರಿ” ಎಂದು ಹಾರೈಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಿನ್ಯಾಸ್ ಕುಣಿತ ಭಜನೆಯ ವೈಶಿಷ್ಟ್ಯತೆಯನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು.
ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಯಾದ ಹವ್ಯಾಸಿ ಹಾಡುಗಾರ ಶ್ರೀ ಮದನ್ ರವರು ಹಾಡಿನ ಮೂಲಕ ಮನರಂಜನೆ ನೀಡಿ ಮಕ್ಕಳನ್ನು ಹಾಡುಗಾರಿಕೆಯಲ್ಲಿ ತೊಡಗಿಸಿಕೂಂಡರು.ಎಸ್.ಡಿ.ಎಂ ಸೆಕೆಂಡರಿ ಶಾಲೆಯ ದೈಹಿಕ ಶಿಕ್ಷಕರಾದ ಪರಮೇಶ್ವರ್ ರವರು ಮನರಂಜನಾ ಆಟಗಳನ್ನು ಆಡಿಸಿದರು.




ಮೂರು ದಿನಗಳು ನಡೆಯುವ ಈ ಶಿಬಿರದಲ್ಲಿ ಬೆಂಕಿ ಇಲ್ಲದೆ ಅಡುಗೆ, ಸ್ಪಾಂಜ್ ಗೊಂಬೆ,ಪೊರಕೆ ಕಡ್ಡಿ ತಯಾರಿಕೆ, ಮಾವಿನ ಎಲೆಗಳ ಬಂಟಿಂಗ್, ವಾಲ್ ಹ್ಯಾಂಗಿಂಗ್, ಹೂಕ್ ಹೊಲಿಗೆ, ವಿವಿಧ ರೀತಿಯ ಕೈ ಹೊಲಿಗೆಗಳು, ಕಸೂತಿ ಹೀಗೆ ಹಲವು ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.



ಈ ಕಾರ್ಯಕ್ರಮವು ಯಶಸ್ವಿಯಾಗಿ ಕೈಗೂಡಲು ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಾಲಾ ಶಿಕ್ಷಕರು ಕೈಜೋಡಿಸಲಿದ್ದಾರೆ.


ಕಾರ್ಯಕ್ರಮವನ್ನು 4ನೇ ತರಗತಿಯ ನಿಧಿ ಸ್ವಾಗತಿಸಿ, ಮನಸ್ವಿ, ಸುರಾನಿ, ನಿಷಿಕಾ, ಸ್ಕಂದನಾ ಪ್ರಾರ್ಥಿಸಿ, ಮಾನ್ವಿ ಭಟ್ ನಿರೂಪಿಸಿ, ಚಿರಾಗ್ ವಂದಿಸಿದರು.
