Thu. Apr 3rd, 2025

Bantwal: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಪುತ್ತೂರು ಘಟಕದ ಸಭೆ

ಬಂಟ್ವಾಳ:(ಮಾ.31) ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ.)ಮೆಲ್ಕಾರ್ ಬಂಟ್ವಾಳ ಇದರ ಪುತ್ತೂರು ಘಟಕದ ಸಭೆಯು ಸ್ವಾಗತ ಹೋಟೆಲ್ ನಲ್ಲಿ ಜರಗಿತು.

ಇದನ್ನೂ ಓದಿ: ⭕ಪುತ್ತೂರು : ದಲಿತ ಅಪ್ರಾಪ್ತ ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಿಯನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು – ಈಶ್ವರಿ ಶಂಕರ್!

ಜಿಲ್ಲಾ ಸಮಿತಿಯ ಸಂಚಾಲಕ ಭಾಸ್ಕರ ಬಾರ್ಯ, ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ, ಸಂಚಾಲಕ ಭವಾನಿ ಶಂಕರ ಶೆಟ್ಟಿ‌ ಪುತ್ತೂರು, ಕೇಂದ್ರ ಸಮಿತಿಯ ಟ್ರಸ್ಟಿ ಪ್ರೊ.ವೇದವ್ಯಾಸ ರಾಮಕುಂಜ, ತಾಲೂಕು ಕಾರ್ಯದರ್ಶಿ ಬಾಲಕೃಷ್ಣ ನಾರ್, ಶ್ರೀಮತಿ ಚಂಚಲಾಕ್ಷಿ , ಪದ್ಮನಾಭ ಉಪಸ್ಥಿತರಿದ್ದರು.

ಶಂಕರ ನಾಯ್ಕ್ ಪುಣಚ ಅವರನ್ನು ನೂತನ ಸದಸ್ಯರಾಗಿ ಸೇರ್ಪಡೆ ಗೊಳಿಸಲಾಯಿತು. ಶ್ರೀಮತಿ ಚಂಚಲಾಕ್ಷಿ ಮತ್ತು ಪದ್ಮನಾಭ ಅವರು ಮಾಡುತ್ತಿರುವ ಸಮಾಜ ಸೇವೆಯ ಬಗ್ಗೆ ಅಭಿನಂದನೆ ಸಲ್ಲಿಸಲಾಯಿತು. ಕೇಂದ್ರ‌ ಸಮಿತಿಯ ಕಾರ್ಯಯೋಜನೆಯ ಮಾಹಿತಿಯನ್ನು ಭಾಸ್ಕರ ಬಾರ್ಯ ನೀಡಿದರು.

ಪ್ರಾರ್ಥನೆ ಮತ್ತು ಚಿಂತನೆ‌ಯನ್ನು ‌ವೇದವ್ಯಾಸ ರಾಮಕುಂಜ ನಡೆಸಿಕೊಟ್ಟರು. ಭವಾನಿ‌ ಶಂಕರ್ ಶೆಟ್ಟಿ ಸ್ವಾಗತಿಸಿ, ಬಾಲಕೃಷ್ಣ ಅನಾರ್ ವಂದಿಸಿದರು.

Leave a Reply

Your email address will not be published. Required fields are marked *