Fri. Apr 4th, 2025

Mundaje: ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ಮುಂಡಾಜೆಯಲ್ಲಿ ಈದುಲ್ ಫಿತರ್ ಸಂಭ್ರಮ – ಪ್ರತಿಭಾನ್ವಿತ ವಿದ್ಯಾರ್ಥಿ ಸಿಮಾಕ್ ತಂಙಳ್ ರಿಗೆ ಸನ್ಮಾನ

ಮುಂಡಾಜೆ:(ಮಾ.31) ಮುಂಡಾಜೆ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ನಲ್ಲಿ ಈದುಲ್ ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಇದನ್ನೂ ಓದಿ: 🛑ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಪುತ್ತಿಲ ನಿವಾಸಿ ಪ್ರವೀಣ್ ಎಂ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ‌ ಘೋಷಣೆ


ಉಸ್ತಾದ್ ಸಿರಾಜುದ್ದೀನ್ ಸ‌ಅದಿ ಗಡಿಯಾರ್ ಖುತುಬಾ ಪಾರಾಯಣ ಮತ್ತು ಚೆರಿಯ ಪೆರ್ನಾಲ್ ನಮಾಝ್ ಗೆ ನೇತೃತ್ವ ನೀಡಿದರು. ಉಸ್ತಾದ್ ತ್ವಾಹಿರ್ ಸ‌ಅದಿ ತಕ್ಬೀರ್ ಗೆ ನೇತೃತ್ವ ನೀಡಿದರು. ಜಮಾಅತ್ ಅಧ್ಯಕ್ಷ ಬಶೀರ್ ನೆಕ್ಕರೆ ಸಹಿತ ಆಡಳಿತ ಸಮಿತಿ ಪದಾಧಿಕಾರಿಗಳು, ಜಮಾಅತ್ ನ ಸರ್ವ ಸದಸ್ಯರು ಭಾಗವಹಿಸಿದ್ದರು. ಸಯ್ಯಿದ್ ಸಿನಾನ್ ಜಮಲುಲ್ಲೈಲಿ ತಂಙಳ್ ಉಪಸ್ಥಿತರಿದ್ದರು.


ಈ ವೇಳೆ ಪ್ರಸ್ತುತ ಸಾಲಿನ ಆಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 5 ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಉಜಿರೆ ರೇಂಜ್ ಮಟ್ಟದ 19 ಮದರಸಗಳ ಪೈಕಿ ಪ್ರಥಮ ಸ್ಥಾನ ಪಡೆದ ಸಯ್ಯಿದ್ ಸಿಮಾಕ್ ಜಮಲುಲ್ಲೈಲಿ ತಂಙಳ್ ಅವರನ್ನು ಶಾಲು ಹೊದಿಸಿ ನಗದು ಪುರಸ್ಕಾರದೊಂದಿಗೆ ಅಭಿನಂದಿಸಲಾಯಿತು. ಎಲ್ಲಾ ತರಾವೀಹ್ ಹಾಗೂ ಹದ್ದಾದ್ ಗೆ ಆಗಮಿಸಿದ ವಿದ್ಯಾರ್ಥಿಗಳಾದ ಸುಜಾಹ್ ಮತ್ತು ಶಿಸ್ತು ಪಾಲಿಸಿದ ಮರ್ವಾನ್ ಅವರಿಗೆ ಅಧ್ಯಕ್ಷರ ವತಿಯಿಂದ ನಗದು ಪುರಸ್ಕಾರ ನೀಡಲಾಯಿತು.


ವಿಶ್ವ ಶಾಂತಿಗೆ ಸಾಮೂಹಿಕ ಪ್ರಾರ್ಥನೆ, ಮರಣ ಹೊಂದಿದವರ ಸ್ಮರಣೆ ಹಾಗೂ ಹಬ್ಬದ ಸಂದೇಶವನ್ನು ಮುಖ್ಯ ಗುರುಗಳು ನಡೆಸಿಕೊಟ್ಟರು.

Leave a Reply

Your email address will not be published. Required fields are marked *