Fri. Apr 4th, 2025

Ujire: ಶ್ರೀ ಕ್ಷೇತ್ರ ಧರ್ಮಸ್ಥಳದ ವಾತ್ಸಲ್ಯ ಮನೆ ಹಸ್ತಾಂತರ

ಉಜಿರೆ :(ಮಾ.31) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಮಾತೃಶ್ರೀ ಅಮ್ಮನವರ ಕನಸಿನ ಕಾರ್ಯಕ್ರಮವಾದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಪ್ರತಿ ತಿಂಗಳು ಮಾಶಾಸನ ಪಡೆಯುತ್ತಿರುವ ಉಜಿರೆ ವಲಯದ ಮಾಚಾರು ಬಟ್ಟಾಜೆ ವಾತ್ಸಲ್ಯ ಸದಸ್ಯರಾದ ಕೂಸಪ್ಪರವರಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡಲಾಗಿದ್ದು, ಮನೆಯನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗೌರವಾನ್ವಿತ ಶರತ್ ಕೃಷ್ಣ ಪಡ್ವೆಟ್ನಾಯರವರು ಹಸ್ತಾಂತರ ಮಾಡಿದರು.

ಇದನ್ನೂ ಓದಿ: 🔴ಉಜಿರೆ: ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ವೈದ್ಯರಿಗೆ ಬೀಳ್ಕೊಡುಗೆ

ವಾತ್ಸಲ್ಯ ಯೋಜನೆಯಂತಹ ಸಮಾಜವನ್ನು ಕಟ್ಟುವ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಪುಣ್ಯದ ಕೆಲಸ. ಶ್ರೀ ಕ್ಷೇತ್ರದಿಂದ ಅದೆಷ್ಟೋ ಅಸಹಾಯಕರಿಗೆ ನೆರವನ್ನು ನೀಡುವ ಯೋಜನೆಗಳಿದ್ದು ನಾವು ಇಂತಹ ಕಾರ್ಯಕ್ರಮಗಳಿಗೆ ಕೈ ಜೋಡಿಸಬೇಕು. ಕೈಲಾದವರು ಬಡವರಿಗೆ ಸಹಾಯ ಮಾಡುವುದು ಅಗತ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೇಂದ್ರ ಒಕ್ಕೂಟ ಅಧ್ಯಕ್ಷರು ಸೀತಾರಾಮ್. ಆರ್, ನಿವೃತ್ತ ಪ್ರಾದೇಶಿಕ ನಿರ್ದೇಶಕರು ಸೀತಾರಾಮ್ ಶೆಟ್ಟಿ, ಜನಜಾಗೃತಿ ವೇದಿಕೆ ವಲಯಾಧ್ಯಕ್ಷರು ಪುಷ್ಪಾವತಿ ಆರ್. ಶೆಟ್ಟಿ, ಉಜಿರೆ ಗಣ್ಯರಾದ ರಾಮಚಂದ್ರ ಶೆಟ್ಟಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ರಾಮಯ್ಯ ಗೌಡ, ಉಜಿರೆ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರು ಪ್ರಶಾಂತ್ ಜೈನ್, ‌

ಮಹಾಬಲ ಕುಲಾಲ್ ಜಿಲ್ಲಾ ನಿರ್ದೇಶಕರು ದ.ಕ ,ತಾಲೂಕು ಯೋಜನಾಧಿಕಾರಿಯವರು ಸುರೇಂದ್ರ. ಕೆ, ಉಮರಬ್ಬ ವಲಯಾಧ್ಯಕ್ಷರು ಉಜಿರೆ ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು, ಉಜಿರೆ ವಲಯದ ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿರಿದ್ದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರಾವಸಂತ್ ಸ್ವಾಗತಿಸಿ ವಲಯ ಮೇಲ್ವಿಚಾರಕರಾದ ಶ್ರೀಮತಿ ವನಿತಾ ಧನ್ಯವಾದ ನೀಡಿದರು.

Leave a Reply

Your email address will not be published. Required fields are marked *