ಬೆಳ್ತಂಗಡಿ:(ಎ.1) ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಬೆಳ್ತಂಗಡಿ ಸ್ಥಳೀಯ ಸಂಸ್ಥೆ ಕಬ್ಸ್ – ಬುಲ್ ಬುಲ್ ಉತ್ಸವ, ಸ್ಕೌಟ್ಸ್ – ಗೈಡ್ಸ್ ಮೇಳ , ರೋವರ್ಸ್ – ರೇಂಜರ್ಸ್ ಸಮಾಗಮ 2024-25 ಎಪ್ರಿಲ್. 5 ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.

ಇದನ್ನೂ ಓದಿ: ⭕ದೆಹಲಿ: ಮಹಾಕುಂಭ ವೈರಲ್ ಬೆಡಗಿ ಮೊನಾಲಿಸಾಗೆ ಸಿನಿಮಾ ಆಫರ್ ಮಾಡಿದ್ದ ನಿರ್ದೇಶಕ ಅರೆಸ್ಟ್
ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯ ನೆರವೇರಿಸಲಿದ್ದಾರೆ.


ಅಧ್ಯಕ್ಷತೆಯನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ವಹಿಸಿಕೊಳ್ಳಲಿದ್ದಾರೆ. ಘನ ಉಪಸ್ಥಿತಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಗಳ ಅಡ್ವೈಸರ್ ಬೋರ್ಡ್ ನ ಅಧ್ಯಕ್ಷರಾದ ಸುಪ್ರಿಯಾ ಹರ್ಷೇಂದ್ರ ಕುಮಾರ್ ರವರು ಉಪಸ್ಥಿತರಿರಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೆ. ಪ್ರತಾಪ್ ಸಿಂಹ ನಾಯಕ್ , ಹರೀಶ್ ಕುಮಾರ್ , ಭವಾನಿ ಶಂಕರ್, ತಾರಾಕೇಸರಿ, ಹೇಮಲತಾ ಎಂ. ಆರ್ ರವರು ಭಾಗವಹಿಸಲಿದ್ದಾರೆ.




