Thu. Apr 3rd, 2025

Belthangady: ಯಕ್ಷ ಭಾರತಿಯಿಂದ ಮಧೂರಿನಲ್ಲಿ “ದೇವದರ್ಶನ” ತಾಳಮದ್ದಳೆ

ಬೆಳ್ತಂಗಡಿ:(ಎ.1) ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ ಮಧೂರು ಅಷ್ಟ ಬಂಧ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷ ಭಾರತಿ (ರಿ.) ಬೆಳ್ತಂಗಡಿ ತಂಡದಿಂದ ಮದವೂರ ವಿಘ್ನೇಶ ವೇದಿಕೆಯಲ್ಲಿ ದೇವ ದರ್ಶನ ತಾಳಮದ್ದಳೆ ಜರಗಿತು.

ಇದನ್ನೂ ಓದಿ: 🔴ಬೆಳ್ತಂಗಡಿ: (ಎ.6) ವಿವಿಧ ಸಂಘ- ಸಂಸ್ಥೆಗಳ ಸಹಕಾರದೊಂದಿಗೆ

ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶರ್ಮ ಕಾಟುಕುಕ್ಕೆ ಚೆಂಡೆ ಮದ್ದಳೆ ಯಲ್ಲಿ ಲಕ್ಷ್ಮೀಶ ಬೆಂಗ್ರೋಡಿ, ರಾಜೇಂದ್ರ ಪ್ರಸಾದ್ ಪುಂಡಿಕೈ ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಅರ್ಥಧಾರಿಗಳಾಗಿ ವಾಸುದೇವ ರಂಗಾಭಟ್ ಮಧೂರು (ಬಲರಾಮ ) ಗುರುರಾಜ ಹೊಳ್ಳ ಬಾಯಾರು (ನಾರದ ) ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ಕೃಷ್ಣ ) ಶಶಿಧರ ಕನ್ಯಾಡಿ ( ಜಾಂಬವತಿ ) ಸುರೇಶ ಕುದ್ರಂತ್ತಾಯ ಉಜಿರೆ ( ಜಾಂಬವ ) ಪಾತ್ರ ನಿರ್ವಹಿಸಿದರು.

ತಾಳಮದ್ದಳೆಯ ಸಂಯೋಜಕರಾದ ಯಕ್ಷಭಾರತಿ ಟ್ರಸ್ಟಿ ಶಶಿಧರ ಕನ್ಯಾಡಿ ಮತ್ತು ಯಕ್ಷಭಾರತಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಟ್ರಸ್ಟಿ ಸುರೇಶ್ ಕುದ್ರೆಂತ್ತಾಯ ಇವರಿಗೆ ಕ್ಷೇತ್ರದ ವತಿಯಿಂದ ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥರು ಗೌರವ ಅರ್ಪಿಸಿದರು. ಗುರುರಾಜ ಹೊಳ್ಳ ಬಾಯಾರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *