ಧರ್ಮಸ್ಥಳ: (ಎ.1) ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆಯಿತು.

ಇದನ್ನೂ ಓದಿ: ⭕ಬೆಂಗಳೂರು: ಒಂದು ಕಿಸ್ ಗೆ 50 ಸಾವಿರ ರೂ! ಲಕ್ಷಾಂತರ ರೂ. ಸುಲಿಗೆ
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಜಿರೆಯ ಹಿತ ಜೆರಾಕ್ಸ್ ನ ಮಾಲಕಿಯಾದ ಶ್ರೀಮತಿ ಪೂರ್ಣಿಮಾ ಸಂಜೀವ ಕೆ ಇವರು ಆಗಮಿಸಿ ಉದ್ಘಾಟನೆಯನ್ನು ನೆರವೇರಿಸಿದರು.


ಇವರು ಮಕ್ಕಳಿಗೆ ಹಲವಾರು ರೀತಿಯ ಬಟ್ಟೆಗಳಿಂದ ಹೂವುಗಳ ತಯಾರಿ , ಬೊಕ್ಕೆ ತಯಾರಿಯನ್ನು ಹೇಳಿಕೊಟ್ಟು ರಜೆಯನ್ನು ಸದುಪಯೋಗ ಪಡಿಸಿಕೊಳ್ಳುವ ರೀತಿಯನ್ನು ಹೇಳಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಶ್ರೀ ಕಮಲ್ ತೇಜು ರಜಪೂತ್ ವಹಿಸಿದ್ದರು.ಶ್ರೀ ಜೋಸೆಫ್ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಶ್ರೀಮತಿ ಪೂರ್ಣಿಮಾ ನಿರ್ವಹಿಸಿದ ಕಾರ್ಯಕ್ರಮಕ್ಕೆ ಶ್ರೀಮತಿ ಕಾವ್ಯ ಸ್ವಾಗತಿಸಿ, ಶ್ರೀಮತಿ ಶ್ರೀಜಾ ವಂದಿಸಿದರು.
