Thu. Apr 3rd, 2025

Puttur: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಪುತ್ತೂರು :(ಎ.1) ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಎ.೧ ರಂದು ಗೊನೆ ಮುಹೂರ್ತ ನಡೆಯಿತು.

ಇದನ್ನೂ ಓದಿ: ⭕ಬೆಳ್ತಂಗಡಿ: ಅಪಘಾತದಲ್ಲಿ ಮೃತಪಟ್ಟ ಸತೀಶ್‌ ಆಚಾರ್ಯ ಮನೆಗೆ ಮಾಜಿ ಸಚಿವ ರಮಾನಾಥ್ ರೈ ಭೇಟಿ


ಬೆಳಿಗ್ಗೆ ಪೂರ್ವ ಶಿಷ್ಟಸಂಪ್ರದಾಯದಂತೆ ದೇವಳದ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿ ಬಳಿಕ ವಾದ್ಯದೊಂದಿಗೆ ತೆರಳಿ ಗೊನೆ ಮುಹೂರ್ತ ನೆರವೇರಿಸಲಾಯಿತು.


ಪ್ರಧಾನ ಅರ್ಚಕ ವೇ.ಮೂ.ವಿ.ಎಸ್. ಭಟ್ ರವರು ಗೊನೆ ಮುಹೂರ್ತ ನಡೆಸಿಕೊಟ್ಟರು. ಇನ್ನೋರ್ವ ಪ್ರಧಾನ ಅರ್ಚಕ ವಸಂತ ಕೆದಿಲಾಯ ಸಹಕರಿಸಿದರು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಶಾಸಕ ಅಶೋಕ್ ಕುಮಾರ್ ರೈ, ಸಮಿತಿ ಸದಸ್ಯರು, ಭಕ್ತರು, ಕರಸೇವಕರು ಈ ವೇಳೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *