Thu. Apr 3rd, 2025

Belthangady: ಬೆಳ್ತಂಗಡಿಯಲ್ಲಿ ಏಪ್ರಿಲ್. 20ರಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆ – ಡಿ.ಕೆ. ಶಿವಕುಮಾರ್ ಭಾಗಿ

ಬೆಳ್ತಂಗಡಿ:(ಎ.2) ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಎಪ್ರಿಲ್.‌ 20 ರಂದು ಭಾನುವಾರ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ, ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು, ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಎ.2 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ನಡೆಯಿತು.

ಇದನ್ನೂ ಓದಿ : 🔴ವೇಣೂರು: ಅಪಘಾತದಲ್ಲಿ ಮೃತಪಟ್ಟ ದಿ. ಸತೀಶ್ ಆಚಾರ್ಯ ರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಾರ್ಯಕರ್ತರ ಸಮಾವೇಶವನ್ನು ಎಲ್ಲರಿಗೂ ಸೇರಿ ಯಶಸ್ವಿಗೊಳಿಸಬೇಕು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಚಿವರು ಹಾಗೂ ಪಕ್ಷದ ರಾಜ್ಯಮಟ್ಟದ ಜಿಲ್ಲಾ ಮಟ್ಟದ ಪ್ರಮುಖರು ಪಾಲ್ಗೊಳ್ಳುತ್ತಾರೆ ಎಂದರು. ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷಗಳ ಸಾಧನೆಯ ಕೈಪಿಡಿಯನ್ನು ಬಿಡುಗಡೆಗೊಳಿಸಲಾಗುವುದು ಎಂದರು.

ಸಭೆಯಲ್ಲಿ ಕಾಂಗ್ರೆಸ್ ನಗರ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ .ಕೆ ಕಾಶಿಪಟ್ಟ, ಗ್ರಾಮೀಣ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ, ಕೆಪಿಸಿಸಿ ಸದಸ್ಯರಾದ ಕೇಶವ ಪಿ ಬೆಳಾಲು, ಪಕ್ಷದ ಪ್ರಮುಖರಾದ ಸುಭಾಷ್ ಚಂದ್ರ ರೈ, ಶ್ರೀಮತಿ ಲೋಕೇಶ್ವರಿ ವಿನಯ ಚಂದ್ರಗೌಡ, ಶ್ರೀಮತಿ ವಂದನಾ ಭಂಡಾರಿ, ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲಿಯನ್ ಮಾಲಾಡಿ, ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಬಿ ಎಂ ಹಮೀದ್,

ಅಲ್ಪಸಂಖ್ಯಾತ ಘಟಕದ ನಗರ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಕರಿಮ್ ಗೇರ್ ಕಟ್ಟೆ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ಸೆಬಾಸ್ಟಿಯನ್,, ಎಸ್, ಸಿ, ಘಟಕದ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ನೇಮಿರಾಜ್ ಕಿಲ್ಲೂರು, ಎಸ್ ಟಿ ಘಟಕದ ನಗರ ಸಮಿತಿಯ ಅಧ್ಯಕ್ಷರಾದ ಜಯಾನಂದ ಪಿಲಿಕಲ, ಬೆಳ್ತಂಗಡಿ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಜಗದೀಶ್ ಡಿ, ಪಂಚಾಯತ್ ರಾಜ್ ಸಂಘಟನೆಯ ನಗರ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ವೇಗಸ್‌, ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ರೋಹಿ ಪುದುವೆಟ್ಟು, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಮೆರಿಟಾ ಪಿಂಟೋ, ತಾಲೂಕು ನಾಮದೇ ರಾವ್ ಮುಂಡಾಜೆ ಮೇಲ್ಮೈನ್ ಸಿಕ್ವೇರಾ,

ಸುನಿಲ್ ಜೈನ್, ಬೇಬಿ ಸುವರ್ಣ ಮಾಲಾಡಿ,ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಆಯುಬ್ ಡಿಕೆ ಶ್ರೀಧರ್ ಕಲೆಂಜ, ವಿನುತಾ ರಜತ್ ಗೌಡ ಭೂ ನ್ಯಾಯ ಮಂಡಳಿಯ ಸದಸ್ಯರಾದ ಇಸ್ಮಾಯಿಲ್ ಪೆರಿಂಜೆ, ಬೊಮ್ಮಣ್ಣ ಗೌಡ ಪುದುವೆಟ್ಟು , ಹಾಗೂ ಪಕ್ಷದ ಪ್ರಮುಖರಾದ ಜೈವಿಕ್ರಂ ಕಲ್ಲಾಪು ಅಬ್ದುಲ್ ರಹೀಮ್, ರಾಜಶೇಖರ್ ಶೆಟ್ಟಿ, ಪ್ರಮೋದ್ ಕುಮಾರ್, ಹನೀಫ್ ಉಜಿರೆ, ಬಾಲಕೃಷ್ಣ ಗೌಡ ಕೇರಿ ಮಾರ್, ರಜತ್ ಗೌಡ ಉಜಿರೆ, ಕಲಂದರ್ ಕೊಕ್ಕಡ,

ಪ್ರವೀಣ್ ಹಳ್ಳಿ ಮನೆ, ರಮಾನಂದ ಸಾಲಿಯಾನ್ ಮುಂಡೂರು, ದೇವಿಪ್ರಸಾದ್ ಶೆಟ್ಟಿ, ರವೀಂದ್ರ ಅಮೀನ್ ಬಳೆಂಜ, ಪ್ರವೀಣ್ ಪಿಂಟೋ, ಗಪೂರ್ ಪುದುವೆಟ್ಟು, ಸುಧೀರ್ ಕುಮಾರ್ ಶೆಟ್ಟಿ ಮಚ್ಚಿನ, ನಾರಾಯಣ ಪೂಜಾರಿ ಮಚ್ಚಿನ ಸದಾಶಿವ ಹೆಗಡೆ ಮೆಚ್ಚಿನ, ಸತೀಶ್ ಹೆಗ್ಡೆ, ಮಾಲಾಡಿ ಪಂಚಾಯತ್ ಅಧ್ಯಕ್ಷರಾದ ಪುನೀತ್ ಕುಮಾರ್ ಮಾಲಾಡಿ, ಹಾಗೂ ಗ್ರಾಮ ಸಮಿತಿ ಬೂತ್ ಸಮಿತಿಯ ಅಧ್ಯಕ್ಷರು ಸರಕಾರದ ನಾಮನಿರ್ದೇಶತ ಸದಸ್ಯರು ಗ್ರಾಮ ಪಂಚಾಯತ್ ಸದಸ್ಯರು ಪಟ್ಟಣ ಪಂಚಾಯತ್ ಸದಸ್ಯರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *