Thu. Apr 3rd, 2025

Chikkamagaluru Tragedy: ಪತ್ನಿ ಮೇಲಿನ ಸಿಟ್ಟಿಗೆ ಮಗಳು, ಅತ್ತೆ, ನಾದಿನಿಯ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಚಿಕ್ಕಮಗಳೂರು (ಎ.2): ತನ್ನಿಂದ ದೂರವಾದ ಹೆಂಡತಿ ಮೇಲಿನ ವಿಪರೀತ ಸಿಟ್ಟಿಗೆ ಮಗಳು, ಅತ್ತೆ ಮತ್ತು ನಾದಿನಿಯನ್ನು ಬಂದೂಕಿನಿಂದ ಗುಂಡು ಹಾರಿಸಿ, ಬಳಿಕ ವ್ಯಕ್ತಿಯೋರ್ವ ತಾನೂ ಆತ್ಮಹತ್ಯೆಗೆ ಶರಣಾಗಿರುವಂತಹ ಭಯಾನಕ ಘಟನೆ ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮದಲ್ಲಿ ನಡೆದಿದೆ. ಅತ್ತೆ ಜ್ಯೋತಿ(50), ನಾದಿನಿ ಸಿಂಧು(26), ಮೌಲ್ಯಾ(7) ಕೊಲೆಯಾದವರು.

ಇದನ್ನೂ ಓದಿ: ⭕ಪುತ್ತೂರು: ಹೋಟೆಲ್ ಮಾಲೀಕ ನೇಣುಬಿಗಿದುಕೊಂಡು ಆತ್ಮಹತ್ಯೆ

ಗುಂಡು ಹಾರಿಸಿಕೊಂಡು ರತ್ನಾಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸತೊಡಕು ಹಬ್ಬದ ರಾತ್ರಿ ನಡೆದ ಮೂರು ಕೊಲೆ ಮತ್ತು ಒಂದು ಆತ್ಮಹತ್ಯೆ ಸದ್ಯ ಕಾಫಿನಾಡನ್ನು ಬೆಚ್ಚಿಬೀಳಿಸಿದೆ. ಬಾಳೆಹೊನ್ನೂರು ಪೊಲೀಸ್ ‌ಠಾಣೆಯಲ್ಲಿ‌‌ ಪ್ರಕರಣ ದಾಖಲಾಗಿದೆ.

ಹೊಸತೊಡಕು ಹಬ್ಬದ ರಾತ್ರಿ ನಾಡ ಬಂದೂಕಿನಿಂದ ಮೂವರನ್ನು ಹತ್ಯೆ ಮಾಡಿ ತಾನು ನಾಡ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮದಲ್ಲಿ ನಡೆದಿದೆ. ಅಳಿಯ ರತ್ನಾಕರ್ ನಿಂದ ಅತ್ತೆ, ನಾದಿನಿ ಹಾಗೂ ತನ್ನ ಮಗಳನ್ನು ಗುಂಡು ಹಾರಿಸಿ ಕೊಲೆ ಮಾಡಿ‌ ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಾಗಲು ಗ್ರಾಮದ ಅತ್ತೆ ಜ್ಯೋತಿ ಅವರ ಮನೆಗೆ ರಾತ್ರಿ ಏಕಾಏಕಿ ನುಗ್ಗಿದ ರತ್ನಾಕರ್, ಅತ್ತೆ ಜ್ಯೋತಿ (50), ನಾದಿನಿ ಸಿಂಧು (26) ಹಾಗೂ 7 ವರ್ಷದ ಮಗು ಮೌಲ್ಯಳನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಬಳಿಕ ತಾನು ಮನೆಯ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಮೂವರನ್ನು ಕೊಂದ ನಾಡ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಸಿಂಧು ಗಂಡ ಅವಿನಾಶ್ ಕಾಲಿಗೂ ಗುಂಡೇಟು ತಗಲಿದ್ದು, ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಚಿಕ್ಕಮಗಳೂರು ‌ಎಸ್ಪಿ ವಿಕ್ರಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಹತ್ಯೆ ಮಾಡುವ ಮುನ್ನ ಸೆಲ್ಫಿ ವಿಡಿಯೋ
ಕಡಬಗೆರೆ ಸಮೀಪದ ಪೂರ್ಣಪ್ರಜ್ಞಾ ಶಾಲೆಯ ಡ್ರೈವರ್ ಆಗಿದ್ದ ರತ್ನಾಕರ್, ಹತ್ಯೆ ಮಾಡುವ ಮುನ್ನ ಸೆಲ್ಫಿ ವಿಡಿಯೋ ಮೂಲಕ ಸಂಸಾರದ ನೋವು ತೋಡಿಕೊಂಡಿದ್ದಾನೆ. ಹೆಂಡತಿ ಬಿಟ್ಟು ಹೋಗಿದ್ದಕ್ಕೆ ಮನನೊಂದು ಈ ಅಮಾನುಷ ಕೃತ್ಯ ಎಸಗಿದ್ದು, ನನ್ನ ಮಗಳ ಖುಷಿ, ಪ್ರೀತಿ, ಸಂತೋಷದ ಮುಂದೆ ಏನೂ ಇಲ್ಲ ಎಂದಿದ್ದಾನೆ. ಮಗಳಿಗೆ ಶಾಲೆಯಲ್ಲಿ ಮಕ್ಕಳು ನಿಮ್ಮ ಅಮ್ಮ ಎಲ್ಲಿ ಎಂದು ಕೇಳ್ತಾರೆ, ಆಗ ಮಗಳು ನನಗೆ ಕೇಳುತ್ತಾಳೆ.

ನನಗೆ ಗೊತ್ತಿಲ್ಲದೆ ಮಗಳು ಆಲ್ಬಂನಿಂದ ಫೋಟೋ ತೆಗೆದುಕೊಂಡು ಹೋಗಿ ಶಾಲೆಯಲ್ಲಿ ತೋರಿಸಿದ್ದಾಳೆ ಎಂದು ವಿವರಿಸಿದ್ದಾರೆ. ತನ್ನ ನಿರ್ಧಾರವನ್ನು ತನ್ನ ಕುಟುಂಬದವರಿಗೆ ಹೇಳಿದ್ದೇನೆ. ತನ್ನ ಮನೆಯವರು ನನಗೆ ಮೋಸ ಮಾಡಿ ಹೋಗಿ 2 ವರ್ಷ ಆಯ್ತು ಎಂದು ಕೊಲೆ ಮಾಡುವ ಮುನ್ನ ಆರೋಪಿ ರತ್ನಾಕರ್ ಸೆಲ್ಫಿ ವಿಡಿಯೋ ಮಾಡಿದ್ದಾರೆ.

ಕೊಪ್ಪ ಮೂಲದ ರತ್ನಾಕರ್, ಅವರ ಪತ್ನಿ, ಮಗಳು ಮತ್ತು ಗಂಡನನ್ನು ಬಿಟ್ಟು ಎರಡು ವರ್ಷಗಳ ಹಿಂದೆ ಬೆಂಗಳೂರು ಸೇರಿದ್ದರು. ಮಗಳು ಮೌಲ್ಯಳನ್ನ ರತ್ನಾಕರ್ ತಾನು ಕೆಲಸ‌ ಮಾಡುತ್ತಿದ್ದ ಶಾಲೆಯಲ್ಲಿ ಓದಿಸುತ್ತಿದ್ದ. ನಿನ್ನೆ ಹೊಸತೊಡಕು ಹಬ್ಬವಾಗಿದ್ದರಿಂದ ಅತ್ತೆ ಜ್ಯೋತಿ, ಮೌಲ್ಯಳನ್ನು ಶಾಲೆಯಿಂದ ಮಾಗಲು ಗ್ರಾಮದ ಮನೆಗೆ ಕರೆತಂದಿದ್ದರು. ಬೆಂಗಳೂರಿನಿಂದ ಹೆಂಡತಿ ‌ಹಬ್ಬಕ್ಕೆ ಬಂದಿದ್ದಾಳೆ ಎಂದುಕೊಂಡ ರತ್ನಾಕರ್, ಅತ್ತೆ ಜ್ಯೋತಿ ,ನಾದಿನಿ ಸಿಂಧೂ, ಮಗಳು ಮೌಲ್ಯಳ‌ ಹತ್ಯೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿರುವುದು ದುರಂತವೇ ಸರಿ.

Leave a Reply

Your email address will not be published. Required fields are marked *