ಮಡಂತ್ಯಾರು:(ಎ.2) ಮ್ಯಾಟ್ರಿಕ್ಸ್ ಫಿಟ್ನೆಸ್ ಮಲ್ಟಿ ಜಿಮ್ ಮಡಂತ್ಯಾರಿನ ಆಶೀರ್ವಾದ್ ಸಭಾಂಗಣದ ಎದುರು ಇರುವ ಕ್ರಿಸ್ಟಲ್ ಕಾಂಪ್ಲೆಕ್ಸ್ ನಲ್ಲಿ ಏ. 1ರಂದು ಶುಭಾರಂಭಗೊಂಡಿತು.

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮ ಗುರು ಫಾ. ಸ್ಟ್ಯಾನಿ ಗೋವಿಯಸ್ ಆಶೀರ್ವಾಚನ ನೆರವೇರಿಸಿದರು. ಫಾದರ್ ಮುಲ್ಲಾರ್ಸ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಫಾ. ಅಜಿತ್ ಮಿನೆಜಸ್ ಉಪಸ್ಥಿತರಿದ್ದು ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಮ್ಯಾಕ್ಸಿಮ್ ಕೊರೆಯ, ಅನಿತಾ ಕೊರೆಯ, ವಾಳೆಯ ಗುರಿಕಾರ ನೆಲ್ಸನ್ ಲಾಸ್ರಾದೊ ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು. ಮಾಲಕ ಅಲ್ವಿಸ್ ಕೊರೆಯ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ, ವಂದಿಸಿದರು.


