ಧರ್ಮಸ್ಥಳ :(ಎ.3) ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಇದನ್ನೂ ಓದಿ: ⭕ಕೊಡಗು: ಪತ್ನಿಯ ಕೊಲೆ ಆರೋಪದಡಿ ಜೈಲುಪಾಲಾಗಿದ್ದ ಪತಿಗೆ ಶಾಕ್
ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ರಾಮ್ ಚಿತ್ರಕಲಾ ಶಿಕ್ಷಕರು,ಶ್ರೀ ಧ. ಮಂ. ಸೆಕೆಂಡರಿ ಶಾಲೆ ಉಜಿರೆ ಇವರು ಆಗಮಿಸಿ ಮಕ್ಕಳಿಗೆ ಡ್ರಾಯಿಂಗ್, ವಿವಿಧ ರೀತಿಯ ಪೇಪರ್ ಕ್ರಾಪ್ಟ್ ಗಳನ್ನು ಮಾಡುವ ರೀತಿಯನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮವು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕಮಲ್ ತೇಜು ರಜಪೂತ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.



ಮಕ್ಕಳು ಬೇಸಿಗೆ ಶಿಬಿರದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಕ್ಷಕರಾದ ಶ್ರೀ ಶೇಖರ್ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಶೋಭಾ ಸ್ವಾಗತಿಸಿ ಜೋಸೆಫ್ ವಂದಿಸಿದರು.
