Sat. Apr 12th, 2025

Bandaru: ಕುರಾಯ ಶ್ರೀ ಸದಾಶಿವ ದೇವಸ್ಥಾನ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಎ.05 ರಂದು(ಇಂದು) ಧಾರ್ಮಿಕ ಸಭೆ ಹಾಗೂ ಶಾಸ್ತ್ರೀಯ ಸಂಗೀತ ಹಾಗೂ ಯಕ್ಷಗಾನ ವೈಭವ ಕಾರ್ಯಕ್ರಮ

ಬಂದಾರು:(ಎ.05) ಬಂದಾರು ಗ್ರಾಮದ ಕುರಾಯ ಶ್ರೀ ಸದಾಶಿವ ದೇವಸ್ಥಾನ ಪ್ರತಿಷ್ಟಾ ಮಹೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಇಂದು ರಾತ್ರಿ 07.00 ಗಂಟೆಗೆ ಧಾರ್ಮಿಕ ಸಭೆ ಹಾಗೂ ಶಾಸ್ತ್ರೀಯ ಸಂಗೀತ ಹಾಗೂ ಯಕ್ಷಗಾನ ವೈಭವ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: 🔴ಬೆಳ್ತಂಗಡಿ: ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ರಕ್ಷಾ ಸಮಿತಿಗೆ ಸದಸ್ಯರ ನೇಮಕ


ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ, ವಾಸುಕಿವನ, ಆದಿಶೇಷ ಶ್ರೀ ರಾಜೇಶ್ ಆರ್.ಎಸ್ ಕಾರಂತ್ ಆಶೀರ್ವಚನ ನೀಡಲಿದ್ದಾರೆ. ಕುರಾಯ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಾಬು ಗೌಡ ಮಡ್ಯಲಕಂಡ ಇವರು ಸಭಾಧ್ಯಕ್ಷತೆ ವಹಿಸಲಿದ್ದಾರೆ.

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಮಾನ್ಯ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ, ಕೆ. ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್ ಬೋಟ್ಯಾಡಿ ಪುತ್ತೂರು, ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯರು,

ಉದ್ಯಮಿಗಳಾದ ನವಶಕ್ತಿ ಶಶಿಧರ ಶೆಟ್ಟಿಬರೋಡ, ಧಾರ್ಮಿಕ ದತ್ತಿ ಇಲಾಖೆಯ ಸದಸ್ಯರಾದ ಕೆ. ಯೋಗೀಶ್ ಕುಮಾರ್. ನಡಕ್ಕರ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಂ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಪ್ರಾದೇಶಿಕ ನಿರ್ದೇಶಕರಾದ ದುಗ್ಗೆ ಗೌಡ, ಯುವ ಉದ್ಯಮಿಗಳಾದ ಕಿರಣ್ ಚಂದ್ರ ಪುಷ್ಪಗಿರಿ ಉರುವಾಲು,ಬೆಂಗಳೂರು, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕುರಾಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಚಂದಪ್ಪ ಪೂಜಾರಿ, ಪ್ರಗತಿಪರ ಕೃಷಿಕ ಧರ್ಣಪ್ಪ ಗೌಡ ಅಂಡಿಲ, ಯಕ್ಷಗಾನ ಸಮಿತಿ ಅಧ್ಯಕ್ಷರಾದ ಹರೀಶ್ ಹೊಳ್ಳ ಕಲ್ರೋಡಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಸಂಪ್ಯ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ವೆಂಕಪ್ಪ ಪುನರಡ್ಕ ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕುರಾಯ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮವಾಹಕರಾದ ಮುರಳಿ ಕುಂಜುರಾಯ, ಕುರಾಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಚಂದಪ್ಪ ಪೂಜಾರಿ ಬೋಲೋಡಿ, ಸಿವಿಲ್ ಕಾಂಟ್ರಾಕ್ಟರ್ ಗುಣಾಕರ ರೈ ಕೊಯ್ಯೂರು, ಶಿಲ್ಪಿಗಳಾದ ಜಗದೀಶ್ ಕಾರ್ಕಳ, ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ.

ಸಂಜೆ 6.00 ರಿಂದ ಬೆಳ್ಳಾರೆ ಕಾಣಿಯೂರು ಗಾನ ಕೀರ್ತನ ಸಂಗೀತ ಶಾಲೆ ಮಾಲಿನಿ ಕೃಷ್ಣ ಮೋಹನ್ ಎಮ್ ಮ್ಯೂಸಿಕ್ ಶಿಕ್ಷಕ ವೃಂದದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಹಾಗೂ ರಾತ್ರಿ 09.00 ರಿಂದ ಯಕ್ಷಗಾನ ವೈಭವ ಕಾರ್ಯಕ್ರಮ ನೆರವೇರಲಿದೆ. ಕುರಾಯ ಶ್ರೀ ಸದಾಶಿವ ಭಕ್ತ ವೃಂದ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಹಾಗೂ ಮೈರೋಳ್ತಡ್ಕ ಶ್ರೀ ಸದಾಶಿವ ಶಾಮಿಯಾನ ಮಾಲಕರಾದ ಪ್ರಶಾಂತ ಗೌಡ ನಿರುಂಬುಡ ಇವರ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವ್ಯವಸ್ಥಾಪನಾ ಸಮಿತಿ ಹಾಗೂ ಜಾತ್ರೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *