ಬೆಳ್ತಂಗಡಿ:(ಎ.5) ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ದೇವರ ಮೂರ್ತಿಯ ಪುರಪ್ರವೇಶದ ಮೆರವಣಿಗೆಗೆ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾದ ಶಶಿಧರ ಶೆಟ್ಟಿ ಗುರುವಾಯನಕೆರೆ ಬರೋಡ ನಿವಾಸದಲ್ಲಿ ಕಾಶಿ ಶೆಟ್ಟಿ ನವಶಕ್ತಿ ರವರು ಚಾಲನೆ ನೀಡಿದರು.

ಇದನ್ನೂ ಓದಿ: ⭕ಉಡುಪಿ: ಉಡುಪಿ ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್
ಎ.4 ರಂದು ಕಾರ್ಕಳದಿಂದ ಶ್ರೀ ಗೋಪಾಲಕೃಷ್ಣ ದೇವರ ಮೂರ್ತಿಯು ಬ್ರಹ್ಮಕಲಶದ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡರ ನಿವಾಸಕ್ಕೆ ಬಂದು ಅದೇ ದಿನ ರಾತ್ರಿ ಗಂಟೆ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತು.


ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಬ್ರಹ್ಮಕಲಶೋತ್ಸವದ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ನವಶಕ್ತಿ, ಟ್ರಸ್ಟ್ ಅಧ್ಯಕ್ಷ ನಾಗಭೂಷಣ್ ರಾವ್, ತುಕಾರಾಂ ನಾಯಕ್, ಬ್ರಹ್ಮಕಲಶೋತ್ಸವದ ಸಮಿತಿ ಗೌರವಾಧ್ಯಕ್ಷರಾದ ಗಣೇಶ್ ರಾವ್ , ಕರುಣಾಕರ ಸುವರ್ಣ, ಯೋಗೀಂದ್ರ ಭಟ್ ಉಳಿ, ಕಾರ್ಯಾಧ್ಯಕ್ಷ ಲಕ್ಷ್ಮಣ್,

ಪ್ರಧಾನ ಕಾರ್ಯದರ್ಶಿ ಪ್ರವೀಣ್ ರೈ, ಕೋಶಾಧಿಕಾರಿ ಅಣ್ಣು ಪೂಜಾರಿ, ಪ್ರಮುಖರಾದ ಮಂಜುನಾಥ್ ಸಾಲ್ಯಾನ್, ರಾಜೇಶ್ ಶೆಟ್ಟಿ ನವಶಕ್ತಿ, ರಕ್ಷಿತ್ ಶೆಟ್ಟಿ ಪಣೆಕ್ಕರ, ರಾಜು ಪ್ರಕಾಶ್ ಶೆಟ್ಟಿ ಮದ್ದಡ್ಕ ಸಹಿತ ಮತ್ತಿತರರು ಹಾಗೂ ವಿವಿಧ ಸಮಿತಿಗಳ ಸಂಚಾಲಕರು ಉಪಸ್ಥಿತರಿದ್ದರು.

