Mon. Apr 7th, 2025

Murder Case: ಗಂಡನ ಕೊಲೆಯನ್ನು ವಿಡಿಯೋ ಕಾಲ್​ನಲ್ಲಿ ನೋಡಿ ಆನಂದಪಟ್ಟ ಹೆಂಡ್ತಿ!!!

ಬೆಳಗಾವಿ, (ಎ.05): ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದ ಬಳಿ ಎಪ್ರಿಲ್ 2ರಂದು ನಡೆದಿದ್ದ ವ್ಯಕ್ತಿ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಬೇರೊಬ್ಬನ ವ್ಯಕ್ತಿ ಜೊತೆ ಸರಸ ಸಲ್ಲಾಪಕ್ಕಾಗಿ ಕಟ್ಟಿಕೊಂಡ ಗಂಡನನ್ನೇ ಹೆಂಡ್ತಿ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ. ಹೌದು… ಶೈಲಾ ಎನ್ನುವ ಮಹಿಳೆ ಪ್ರಿಯಕರ ರುದ್ರಪ್ಪ ಹೊಸೆಟ್ಟಿ ಎನ್ನುವಾತನಿಗೆ ಸುಪಾರಿ ನೀಡಿ ಗಂಡ ಬಲೋಗಿ ಗ್ರಾಮದ ಶಿವನಗೌಡ ಪಾಟೀಲ್​ನನ್ನು (43) ಕೊಲೆ ಮಾಡಿಸಿದ್ದಾಳೆ.

ಇದನ್ನೂ ಓದಿ: 🔆ಬಂಟ್ವಾಳ:(ಎ.7- 8) ಶ್ರೀ ಗಿಲ್ಕಿಂಜತ್ತಾಯ ದೈವಸ್ಥಾನ ವೀರಕಂಭ ಇದರ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ

ಅಷ್ಟೇ ಅಲ್ಲ ಗಂಡನನ್ನು ಕೊಲೆ ಮಾಡುತ್ತಿರುವ ದೃಶ್ಯವನ್ನು ವಾಟ್ಸಪ್​ ಕಾಲ್​ನಲ್ಲಿ ಲೈವ್ ನೋಡಿದ್ದಾಳೆ. ಬಳಿಕ ತನಗೆ ಏನು ಗೊತ್ತಿಲ್ಲವೆಂದು ಗಂಡನ ಮೃತದೇಹದ ಮೇಲೆ ಬಿದ್ದು ಗೋಳಾಡಿ ಅತ್ತು ಪ್ರಕರಣವನ್ನು ಡೈವರ್ಟ್ ಮಾಡಲು ಯತ್ನಿಸಿದ್ದಳು. ಆದ್ರೆ, ಪೊಲೀಸರು ಬಿಡಬೇಕಲ್ಲ. ಶೈಲಾಳ ಫೋನ್ ಪರಿಶೀಲನೆ ಮಾಡಿದಾಗ ಆಕೆಯ ನವರಂಗಿ ಆಟ ಬಟಾಬಯಲಾಗಿದೆ. ಆತನ ಸಹವಾಸ ಬಿಡುವಂತೆ ಹೇಳಿದ್ದಕ್ಕೆ ಗಂಡನ ಕಥೆಯನ್ನ ಮುಗಿಸಿದ್ದಾಳೆ.

ಕಳೆದ ಎರಡು ವರ್ಷದಿಂದ ರುದ್ರಪ್ಪ ಹೊಸೆಟ್ಟಿ ಹಾಗೂ ಶೈಲಾ ನಡುವೆ ಸಂಬಂಧ ಇತ್ತು. ಗಂಡನಿಗೆ ಗೊತ್ತಾಗದಂತೆ ರುದ್ರಪ್ಪನೊಂದಿಗೆ ಚಕ್ಕಂದವಾಡುತ್ತಿದ್ದಳು. ಆದ್ರೆ, ಆರು ತಿಂಗಳ ಶೈಲಾಳ ಲವ್ವಿಡವ್ವಿಯ ಗುಟ್ಟು ಶಿವನಗೌಡನಿಗೆ ಗೊತ್ತಾಗಿದ್ದು, ಅವನ ಸಹವಾಸ ಬಿಡು ಎಂದು ತಿಳಿಸಿ ಹೇಳಿದ್ದಾನೆ. ಆದ್ರೆ, ಶೈಲಾ ತಾಳಿಕಟ್ಟಿದ ಗಂಡನನ್ನೇ ಬಿಡುತ್ತೇನೆ ಹೊರತು ರುದ್ರಪ್ಪನನ್ನು ಬಿಡಲಾಗಲ್ಲ ಎನ್ನುವ ನಿರ್ಧಾರ ಮಾಡಿ ಶಿವನಗೌಡನನ್ನೇ ಮುಗಿಸಲು ತೀರ್ಮಾನಿಸಿದ್ದಾಳೆ.

ಗಂಡನನನ್ನೇ ಕೊಲ್ಲಲು ತೀರ್ಮಾನಿಸಿದ್ದ ಶೈಲಾ, ಪ್ರಿಯಕರ ರುದ್ರಪ್ಪನಿಗೆ ವಿಚಾರ ತಿಳಿಸಿದ್ದಾಳೆ. ಹೀಗೆ ಇಬ್ಬರು ಹೇಗೆ ಕೊಲೆ ಮಾಡಬೇಕು? ಎಲ್ಲಿ ಮಾಡಬೇಕೆಂದು ಕರೆಕ್ಟ್ ಆಗಿ ಪ್ಲಾನ್ ಮಾಡಿಕೊಂಡಿದ್ದರು. ಅದರಂತೆ ಶೈಲಾ ತನನ್ನು ತವರು ಮನೆಗೆ ಬಿಟ್ಟು ಬರುವಂತೆ ಗಂಡನಿಗೆ ಹೇಳಿದ್ದಾಳೆ. ಅದರಂತೆ ಶಿವನಗೌಡ ಹೆಂಡ್ತಿಯನ್ನು ತವರು ಮನೆಗೆ ಬಿಟ್ಟು ಏಪ್ರಿಲ್ ‌2ರಂದು ಅಲ್ಲಿಂದ ವಾಪಸ್ ಆಗುತ್ತಿದ್ದ. ಆ ವೇಳೆ ಎಣ್ಣೆ ಪಾರ್ಟಿ ಮಾಡಿಸಿ ಕೊಂದಿದ್ದಾರೆ. ಶೈಲಾಳ ಪ್ರಿಯಕರ ರುದ್ರಪ್ಪ ಹೊಸೆಟ್ಟಿ, ಶಿವನಗೌಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಇದನ್ನು ಹೆಂಡತಿಯಾದವಳು ಶೈಲಾ ರುದ್ರಪ್ಪ ವಾಟ್ಸಪ್ ಕಾಲ್​ನಲ್ಲಿ ಗಂಡ ಸಾಯುವುದನ್ನು ಕಣ್ಣಾರೆ ನೋಡಿ ಆನಂದಪಟ್ಟಿದ್ದಾಳೆ.

ಏಪ್ರಿಲ್ 2ರಂದು ಶಿವನಗೌಡ ಸತ್ತ ಬಳಿಕ ಶೈಲಾ ಗೋಳಾಡಿ ನಾಟಕದ ಕಣ್ಣೀರಿಟ್ಟಿದ್ದಳು. ಇನ್ನು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ಖಾನಾಪುರ ಠಾಣೆ ಪೊಲೀಸರು, ಶೈಲಾಳ ಫೋನ್ ತೆಗೆದುಕೊಂಡು ಕಾಲ್ ಹಿಸ್ಟರಿ ಪರಿಶೀಲನೆ ಮಾಡಿದ್ದು, ಆಗ ಶೈಲಾ ಹಾಗೂ ರುದ್ರಪ್ಪನ ಗುಟ್ಟು ರಟ್ಟಾಗಿದೆ. ಬಳಿಕ ಪೊಲೀಸರು ಶೈಲಾಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಅಸಲಿ ಕಹಾನಿ ಬಟಾಬಯಲಾಗಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು