Mon. Apr 7th, 2025

Bandaru: ‌ ಕುರಾಯ ಶ್ರೀ ಸದಾಶಿವ ದೇವಸ್ಥಾನ ಪ್ರತಿಷ್ಠಾ ಮಹೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಬಂದಾರು:(ಎ.7) ಬಂದಾರು ಗ್ರಾಮದ ಕುರಾಯ ಶ್ರೀ ಸದಾಶಿವ ದೇವಸ್ಥಾನ ಪ್ರತಿಷ್ಠಾ ಮಹೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಎಪ್ರಿಲ್ 05 ರಂದು ದೇವಸ್ಥಾನ ವಠಾರ ದಲ್ಲಿ ಧಾರ್ಮಿಕ ಸಭೆ ನೆರವೇರಿತು.

ಇದನ್ನೂ ಓದಿ:💠ಬೆಳಾಲು: ಮಾಯಾದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೀರು ಉಳಿಸಿ, ಭವಿಷ್ಯದ ನೀರು ಇಂದಿನ ಕಾಳಜಿ ಅಭಿಯಾನ


ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ, ವಾಸುಕಿವನ, ಆದಿಶೇಷ ಶ್ರೀ ರಾಜೇಶ್ ಆರ್.ಎಸ್ ಕಾರಂತ್ ಆಶೀರ್ವಚನ ನೀಡಿದರು, ಕುರಾಯ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಾಬು ಗೌಡ ಮಡ್ಯಲಕಂಡ ಇವರು ಸಭಾಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಯೋಜನಾಧಿಕಾರಿ ದಯಾನಂದ ಪೂಜಾರಿ, ಯುವ ಉದ್ಯಮಿಗಳಾದ ಕಿರಣ್ ಚಂದ್ರ ಪುಷ್ಪಗಿರಿ ಉರುವಾಲು,ಬೆಂಗಳೂರು, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂದರ್ಭಯೋಚಿತವಾಗಿ ಮಾತನಾಡಿದರು.

ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಕುರಾಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಚಂದಪ್ಪ ಪೂಜಾರಿ, ಪ್ರಗತಿಪರ ಕೃಷಿಕ ಧರ್ಣಪ್ಪ ಗೌಡ ಅಂಡಿಲ, ಯಕ್ಷಗಾನ ಸಮಿತಿ ಅಧ್ಯಕ್ಷರಾದ ಹರೀಶ್ ಹೊಳ್ಳ ಕಲ್ರೋಡಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಯ್ಯ ಆಚಾರ್ಯ,ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೆಂಕರಮಣ ಗೌಡ ಬಾಳೆಹಿತ್ತಿಲು, ನಿರಂಜನ ಗೌಡ ನಡುಮಜಲು, ಲಕ್ಷ್ಮಣ ನಾಯ್ಕ ಮುಂಡೂರು,

ಶ್ರೀಮತಿ ದಮಯಂತಿ ಪಾoಜಾಳ, ಶ್ರೀಮತಿ ರೂಪ ವಿಶ್ವಕರ್ಮ, ಗೌರವ ಉಪಸ್ಥಿತಿ ವಹಿಸಿದ್ದರು, ಈ ಸಂದರ್ಭದಲ್ಲಿ ಕುರಾಯ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮವಾಹಕರಾದ ಮುರಳಿ ಕುಂಜುರಾಯ, ಕುರಾಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಚಂದಪ್ಪ ಪೂಜಾರಿ ಬೋಲೋಡಿ, ಸಿವಿಲ್ ಕಾಂಟ್ರಾಕ್ಟರ್ ಗುಣಾಕರ ರೈ ಕೊಯ್ಯೂರು, ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.


ಅಧ್ಯಾಪಕರಾದ ಮಹೇಶ್ ಬೆಳಾಲು ಸ್ವಾಗತಿಸಿ ಸನ್ಮಾನ ಪತ್ರ ವಾಚಿಸಿದರು, ಅಧ್ಯಾಪಕರಾದ ಮಾಧವ ಗೌಡ ದೊರ್ತೋಡಿ ನಿರೂಪಿಸಿ,ವೆಂಕಟರಮಣ ಬಾಳೆಹಿತ್ತಿಲು ಧನ್ಯವಾದವಿತ್ತರು. ವೇದಿಕೆಯಲ್ಲಿ ಬೆಳ್ಳಾರೆ ಕಾಣಿಯೂರು ಗಾನ ಕೀರ್ತನ ಸಂಗೀತ ಶಾಲೆ ಮಾಲಿನಿ ಕೃಷ್ಣ ಮೋಹನ್ ಎಮ್ ಮ್ಯೂಸಿಕ್ ಶಿಕ್ಷಕ ವೃಂದದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಹಾಗೂ ಯಕ್ಷಗಾನ ವೈಭವ ಕಾರ್ಯಕ್ರಮ ನೆರವೇರಿತು. ಕುರಾಯ ಶ್ರೀ ಸದಾಶಿವ ಭಕ್ತ ವೃಂದ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಹಾಗೂ ಮೈರೋಳ್ತಡ್ಕ ಶ್ರೀ ಸದಾಶಿವ ಶಾಮಿಯಾನ ಮಾಲಕರಾದ ಪ್ರಶಾಂತ ಗೌಡ ನಿರುoಬುಡ ಇವರ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

Leave a Reply

Your email address will not be published. Required fields are marked *