Mon. Apr 7th, 2025

Belthangady: ಸ.ಉ.ಹಿ.ಪ್ರಾ.ಶಾಲೆ ಕರ್ನೋಡಿಯಲ್ಲಿ ಸ್ನೇಹ ಸಮ್ಮಿಲನ ಮತ್ತು ನವೀಕರಣಗೊಂಡ ಶಾಲೆಯ ಹಸ್ತಾಂತರ ಕಾರ್ಯಕ್ರಮ – ಹಳೆ ವಿದ್ಯಾರ್ಥಿ ಸಂಘದ ಹೆಸರಿಗೆ ₹ 5ಲಕ್ಷ ದೇಣಿಗೆ ಘೋಷಿಸಿದ ಉದ್ಯಮಿ ಶಶಿಧರ್ ಶೆಟ್ಟಿ

ಬೆಳ್ತಂಗಡಿ:(ಎ.1) ಹಳೆ ವಿದ್ಯಾರ್ಥಿ ಸಂಘ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕರ್ನೋಡಿ ಲಾಯಿಲ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ.) ಉಜಿರೆ,

ಇದನ್ನೂ ಓದಿ: ⭕ಸುಳ್ಯ: ಕಾರಿನಲ್ಲಿ ಹುಚ್ಚಾಟ ಪ್ರಕರಣ

ಕ್ಯಾನ್ ಫಿನ್‌ ಹೋಮ್ಸ್‌ ಸಂಸ್ಥೆ ಬೆಂಗಳೂರು, ರೋಟರಿ ಇಂದಿರಾ ನಗರ ಬೆಂಗಳೂರು, ರೋಟರಿ ಕ್ಲಬ್‌ ಬೆಳ್ತಂಗಡಿ ಮತ್ತು ಬೆಳ್ತಂಗಡಿ ಪತ್ರಕರ್ತರ ಸಂಘ(ರಿ) ಬೆಳ್ತಂಗಡಿ ಇದರ ಸಹಕಾರದೊಂದಿಗೆ ಸ್ನೇಹ ಸಮ್ಮಿಲನ ಮತ್ತು ನವೀಕರಣಗೊಂಡ ಶಾಲೆಯ ಹಸ್ತಾಂತರ ಕಾರ್ಯಕ್ರಮವು ಎಪ್ರಿಲ್‌.6 ರಂದು ದ.ಕ.ಜಿ.ಪಂ.ಉ.ಹಿ.ಪ್ರಾ. ಶಾಲೆ ಕರ್ನೋಡಿಯಲ್ಲಿ ನಡೆಯಿತು.

ಹಳೆ ವಿದ್ಯಾರ್ಥಿ ಸಂಘದ ಕಛೇರಿಯನ್ನು ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಉದ್ಘಾಟಿಸಿ, ಮಾತಮಾಡಿದ ಅವರು ಸರ್ಕಾರಿ ಶಾಲೆಯನ್ನು ಉಳಿಸುವಂತಹ ಕೆಲಸವನ್ನು ಮೋಹನ್ ಕುಮಾ‌ರ್ ನೇತೃತ್ವದ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ವ್ಯವಸ್ಥಿತ ರೀತಿಯಲ್ಲಿ ಮಾಡುತ್ತಿದೆ.

ಎಲ್ಲರೂ ಇವರೊಂದಿಗೆ ಕೈಜೋಡಿಸುವ ಕೆಲಸ ಮಾಡಬೇಕಿದೆ. ಕರ್ನೋಡಿ ಶಾಲೆಯ ಅಭಿವೃದ್ಧಿಗೆ ಪಣ ತೊಟ್ಟ ಇಲ್ಲಿನ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯ ಶ್ಲಾಘನೀಯ ಎಂದರು. ಹಳೆ ವಿದ್ಯಾರ್ಥಿ ಸಂಘದ ಹೆಸರಿನಲ್ಲಿ ರೂ. 5 ಲಕ್ಷ ರೂಪಾಯಿಯನ್ನು ಡೆಪಾಸಿಟ್ ಮಾಡಿ ಪ್ರತೀ ವರ್ಷ ಅದರ ಬಡ್ಡಿಯ ಹಣವನ್ನು ಶಾಲೆಯ ಕಾರ್ಯಚಟುವಟಿಕೆಗಳಿಗೆ ವಿನಿಯೋಗಿಸಬಹುದು ಎಂದರು.

Leave a Reply

Your email address will not be published. Required fields are marked *