Thu. Apr 17th, 2025

Bandaru: ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ದರ್ಶನ ಬಲಿ , ಬಟ್ಟಲು ಕಾಣಿಕೆ, ಮಹಾಪೂಜೆ, ರಕ್ತೇಶ್ವರಿ ದೈವದ ನೇಮೋತ್ಸವ, ಶ್ರೀ ಸದಾಶಿವ ದೇವರ ರಥೋತ್ಸವ

ಬಂದಾರು :(ಎ.09) ಬಂದಾರು ಗ್ರಾಮದ ಕುರಾಯ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪರಮಪೂಜ್ಯ ಧರ್ಮಸ್ಥಳ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರು ಹಾಗೂ ಗೌರವಾಧ್ಯಕ್ಷರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರವರ ಮಾರ್ಗದರ್ಶನದೊಂದಿಗೆ

ಇದನ್ನೂ ಓದಿ: ⭕ಬೆಳ್ತಂಗಡಿ: ಹಿರಿಯ ನ್ಯಾಯವಾದಿ ಜೆ.ಕೆ. ಪೌಲ್ ರಿಗೆ ಬೆಳ್ತಂಗಡಿ ವಕೀಲರ ಸಂಘದಿಂದ ಶ್ರದ್ಧಾಂಜಲಿ ಸಭೆ

ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಎಪ್ರಿಲ್ 08 ಮಂಗಳವಾರ ಬೆಳಗ್ಗೆ ಉತ್ಸವ ಬಲಿ, ವಿಶೇಷ ಸುತ್ತುಗಳು, ದರ್ಶನ ಬಲಿ, ನಂತರ ಬಟ್ಟಲು ಕಾಣಿಕೆ, ಅಪ್ಪಂಗಾಯಿ, ಶ್ರೀ ದೇವರಿಗೆ ಕಲಶಾಭಿಷೇಕ, ರುದ್ರಾಭಿಷೇಕ, ತುಲಾಭಾರ ಸೇವೆ,

ಮಧ್ಯಾಹ್ನ ಮಹಾಪೂಜೆ, ನಂತರ ಪಲ್ಲಪೂಜೆ, ಆರಾಟಕ್ಕೆ ಕುದಿ ಕರೆಯುವುದು, ಪ್ರಸಾದ ವಿತರಣೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ, ಸಂಜೆ ತೇರ ಕಲಶ, ಉತ್ಸವ ಬಲಿ, ವಿಶೇಷ ಸುತ್ತುಗಳು, ನಂತರ ರಕ್ತೇಶ್ವರಿ ದೈವದ ನೆಮೋತ್ಸವ, ರಾತ್ರಿ ಶ್ರೀ ಸದಾಶಿವ ದೇವರ ರಥೋತ್ಸವ, ನಂತರ ರಕ್ತೇಶ್ವರಿ ದೈವದ ಸಹಿತ ಶ್ರೀ ದೇವರ ಮೂಲ ಕ್ಷೇತ್ರಕ್ಕೆ ಭೇಟಿ, ರಾತ್ರಿ ಶ್ರೀ ಕ್ಷೇತ್ರಕ್ಕೆ ದೇವರ ಆಗಮನ, ನಂತರ ಫಲಹಾರ ಮತ್ತು ಭೂತಬಲಿ, ನಂತರ ದೇವರ ಶಯನೋತ್ಸವ ಕಾರ್ಯಕ್ರಮ ಚೆಂಡೆನಾದನ, ಬ್ಯಾಂಡ್ ವಾಳಗ, ಸಿಡಿಮದ್ದು, ಜೇಂಕಾರದೊಂದಿಗೆ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.

ಈ ಸಂದರ್ಭದಲ್ಲಿ ಕುರಾಯ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಾಬು ಗೌಡ ಮಡ್ಯಲಕಂಡ,ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಕುರಾಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಚಂದಪ್ಪ ಪೂಜಾರಿ, ಪ್ರಗತಿಪರ ಕೃಷಿಕ ಧರ್ಣಪ್ಪ ಗೌಡ ಅಂಡಿಲ,

ಯಕ್ಷಗಾನ ಸಮಿತಿ ಅಧ್ಯಕ್ಷರಾದ ಹರೀಶ್ ಹೊಳ್ಳ ಕಲ್ರೋಡಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಯ್ಯ ಆಚಾರ್ಯ,ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೆಂಕರಮಣ ಗೌಡ ಬಾಳೆಹಿತ್ತಿಲು, ನಿರಂಜನ ಗೌಡ ನಡುಮಜಲು, ಲಕ್ಷ್ಮಣ ನಾಯ್ಕ ಮುಂಡೂರು, ಶ್ರೀಮತಿ ದಮಯಂತಿ ಪಾoಜಾಳ, ಶ್ರೀಮತಿ ರೂಪ ವಿಶ್ವಕರ್ಮ, ಅರ್ಚಕರಾದ ಭೀಮ್ ಭಟ್, ಜಾತ್ರೋತ್ಸವ ಸಮಿತಿ ಪದಾಧಿಕಾರಿಗಳು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *