Love Marriage:, (ಎ.9): ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕ ಪರಸ್ಪರ ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಪೊಲೀಸ್ ಠಾಣೆಯಲ್ಲಿ ಒಂದಾಗಿದ್ದರು. ಚಿಕ್ಕಬಳ್ಳಾಪುರ ತಾಲ್ಲೂಕಿನ ಮೈಲಪ್ಪನಹಳ್ಳಿ ಗ್ರಾಮದ ನಿವಾಸಿ 23 ವರ್ಷದ ಪಸೀಯಾ ಕಳೆದ 2 ವರ್ಷಗಳಿಂದ ತನ್ನ ಮನೆ ಎದುರಿನ ಹಿಂದೂ ಯುವಕ 24 ವರ್ಷದ ನಾಗಾರ್ಜುನನನ್ನು ಪ್ರೀತಿಸುತ್ತಿದ್ದಳು.

ಇದನ್ನೂ ಓದಿ: 💠ಬೆಳ್ತಂಗಡಿ: ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ರಕ್ಷಾ ಸಮಿತಿಗೆ ಸದಸ್ಯರ ನೇಮಕ
ವಾಟ್ಸಾಪ್ ಮೂಲಕ ಆರಂಭವಾಗಿ ಇವರ ಪ್ರೀತಿ, ಪ್ರೇಮ, ಪ್ರಣಯ ಕೊನೆಗೆ ಮದುವೆವರೆಗೂ ಬಂದಿದ್ದು, ಇದೀಗ ಅಂತಿಮವಾಗಿ ಜಾತಿ, ಧರ್ಮ ಬದಿಗಿಟ್ಟು ಪೋಷಕರ ವಿರೋಧದ ನಡುವೆಯೂ ಒಂದಾಗಿದ್ದರು.

ಎದುರು ಬದುರು ಮನೆಯವರಾದ ಪಸೀಯಾ ಹಾಗೂ ನಾಗಾರ್ಜುನ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ, ಇವರಿಬ್ಬರ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಈ ಜೋಡಿ ಮನೆಬಿಟ್ಟು ಬಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‍ಠಾಣೆ ಮೊರೆ ಹೋಗಿದ್ದರು. ಕೊನೆಗೆ ಇಬ್ಬರ ಪೋಷಕರು ಆಗಮಿಸಿ, ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದರೂ ಸಹ ಪಸೀಯಾ ಪ್ರೀತಿಸಿದವನ ಜೊತೆಯೇ ಬಾಳುವುದಾಗಿ ಹಠ ಹಿಡಿದು, ಕೊನೆಗೆ ನಾರ್ಗಾಜುನನನ್ನು ವರಿಸಿದ್ದಳು.


ಆದ್ರೆ, ಇದೀಗ 15 ದಿನದಲ್ಲೇ ಈ ಪ್ರೇಮ ವಿವಾಹ ಅಂತ್ಯಕಂಡಿದೆ. ತಾಯಿಗೆ ಅನಾರೋಗ್ಯದ ಕಾರಣ ನೀಡಿ ಪಸೀಯಾ, ನಾಗಾರ್ಜುನನನ್ನು ಸಂಸಾರ ಎನ್ನುವ ಸಾಗರದ ನಡು ನೀರಿನಲ್ಲೇ ಬಿಟ್ಟು ತವರಿಗೆ ವಾಪಸ್ ಹೋಗಿದ್ದಾಳೆ. ಇದರಿಂದ ಪಸೀಯಾಳನ್ನು ನಂಬಿ ಹೋಗಿದ್ದ ನಾಗಾರ್ಜುನ ಈಗ ಕಂಗಾಲಾಗಿದ್ದಾನೆ.

ಆಗ ಪೊಲೀಸರು ಎರಡೂ ಕಡೆಯ ಪೋಷಕರನ್ನು ಕರೆಸಿ ವಿಚಾರಣೆ ಮಾಡಿದ್ದರು. ಯುವತಿಯನ್ನು ಸಹ ಅವರ ಪೋಷಕರ ಜೊತೆ ಮಾತನಾಡಲು ಅವಕಾಶ ನೀಡಲಾಗಿತ್ತು. ಆ ವೇಳೆ ಪೋಷಕರು ಎಷ್ಟು ಬೇಡಿಕೊಂಡಿದ್ದರೂ ಸಹ ಯುವತಿ ಮಾತ್ರ ತಾನು ಮದುವೆಯಾದ ಯುವಕನ ಜೊತೆಯಲ್ಲೇ ಹೋಗುವುದಾಗಿ ಕಡ್ಡಿಮುರಿದಂತೆ ಹೇಳಿದ್ದಳು. ಆದ್ರೆ, ಇದೀಗ ಯುವತಿ, ಯುವಕನನ್ನು ನಡು ನೀರಿನಲ್ಲೇ ಕೈಕೊಟ್ಟು ಹೋಗಿದ್ದಾಳೆ.
