ಬೆಳ್ತಂಗಡಿ:(ಎ.10) ಸುಪ್ರಜಾ ಕಲಾಕೇಂದ್ರ, ಕನ್ಯಾಡಿ ಹಾಗೂ ನಿನಾದ ಕ್ಲಾಸಿಕಲ್ ಮುಂಡ್ರುಪ್ಪಾಡಿ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಸಂಗೀತ ಆಸಕ್ತ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.

ಜೀ ಕನ್ನಡ ಸರಿಗಮಪ ಖ್ಯಾತಿಯ ಶ್ರೀಹರ್ಷ ಮೈಸೂರು ಮಾರ್ಗದರ್ಶನದಲ್ಲಿ “ಗಾನ ನಿನಾದ” ಎಪ್ರಿಲ್ 22 ಮತ್ತು ಎಪ್ರಿಲ್. 23 ರಂದು, 2 ದಿನದ ಸಂಗೀತ ಶಿಬಿರದ ತರಬೇತಿಯು ನಡೆಯಲಿದ್ದು, ಸಂಗೀತ ಆಸಕ್ತರಿಗೆ ಕಲಿಯುವ ಸುಲಭ ವಿಧಾನವನ್ನು ತಿಳಿಸಿಕೊಡಲಿದ್ದಾರೆ.
ಜೀ ಸರಿಗಮಪ ಖ್ಯಾತಿಯ ಶ್ರೀಹರ್ಷರವರು ಏನಂದ್ರು?!:
ಯಾರ್ಯಾರು ಸುತ್ತಮುತ್ತ ಒಳ್ಳೆಯ ಗಾಯಕರಿದ್ದೀರಿ ಅವರಿಗೆ ಒಂದು ಉತ್ತಮವಾದ ಅವಕಾಶ. ಎ. 22 & 23 ರಂದು ಕನ್ಯಾಡಿ ಯಲ್ಲಿ ಎರಡು ದಿನಗಳ ಸುಗಮ ಸಂಗೀತ ಶಿಬಿರ ನಡೆಯಲಿದೆ. ಹಾಗಾಗಿ ನಾನು (ಹರ್ಷ) ತನ್ನ ಹಾಡುಗಳನ್ನು ಹಂಚಿಕೊಳ್ಳಲು ಬರುತ್ತಿದ್ದೇನೆ. ಕವಿ ಏನು ಹೇಳಲು ಇಷ್ಟ ಪಡುತ್ತಿದ್ದಾರೆ, ಹಾಡಿನ ಅರ್ಥವೇನು ,

ಹಾಡೋದು ಹೇಗೆ, ಹಾಡನ್ನು ಅನುಭವಿಸಿ ಹಾಡೋದಕ್ಕೆ ನಾವು ಏನೇನು ಪ್ರಯತ್ನ ಪಡಬೇಕು, ಈ ಎಲ್ಲಾ ವಿಷಯಗಳನ್ನೂ ಒಳಗೊಂಡಂತೆ
ಮಕ್ಕಳಿಗೆ ಒಂದು ಬ್ಯಾಚ್, ದೊಡ್ಡವರಿಗೆ ಇನ್ನೊಂದು ಬ್ಯಾಚ್ ನ ಹಾಗೇ ವ್ಯವಸ್ಥಿತವಾಗಿ ಸುಪ್ರಜಾ ಕಲಾಕೇಂದ್ರ, ಕನ್ಯಾಡಿ ಹಾಗೂ ನಿನಾದ ಕ್ಲಾಸಿಕಲ್ ಮುಂಡ್ರುಪ್ಪಾಡಿ ಪ್ರಸ್ತುತ ಪಡಿಸುತ್ತಿದ್ದಾರೆ. ಆ ಎರಡು ದಿನ ನಾವು ಒಳ್ಳೆಯ ಹಾಡುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳೋಣ ಎಂದು ಹೇಳಿದರು.

INSTAGRAM LINK:
https://www.instagram.com/reel/DHnfzIVIFyT/?utm_source=ig_web_copy_link&igsh=MzRlODBiNWFlZA==
FACEBOOK LINK:
https://www.facebook.com/share/v/1BqdA7cZns
ಸಂಗೀತ ತರಬೇತಿ ಕಾರ್ಯಾಗಾರದ ನೋಂದಣಿಗಾಗಿ 8197236791 / 8748968791 / 9108181286 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.


