Thu. Apr 17th, 2025

Gerukatte: ಗೇರುಕಟ್ಟೆ ಉಚಿತ ವ್ಯಕ್ತಿತ್ವ ವಿಕಸನ ಶಿಬಿರ

ಗೇರುಕಟ್ಟೆ:(ಎ.10) ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ಕೇಂದ್ರ ಕಛೇರಿ ತುಮಕೂರು ನೇತ್ರಾವತಿ ವಲಯ ಬೆಳ್ತಂಗಡಿ ತಾಲೂಕು ಕಳಿಯ ಶಾಖೆಯ ವತಿಯಿಂದ ಕ್ಷೀರಸಂಗಮ ಸಭಾ ಭವನದಲ್ಲಿ 12 ದಿನಗಳ ಮಕ್ಕಳ ಚೈತನ್ಯ ಶಿಬಿರವ ಶ್ರೀ ರಾಮನವಮಿಯಂದು ಪ್ರಾರಂಭವಾಯಿತು. ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇದನ್ನೂ ಓದಿ: 💮ಬೆಳ್ತಂಗಡಿ: ವಿಶ್ವ ಹಿಂದೂ ಪರಿಷತ್ ನ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ನಂದಗೋಕುಲ ಗೋಶಾಲೆಗೆ ಭೇಟಿ

ಗೇರುಕಟ್ಟೆ ಕ್ಷೀರಸಂಗಮ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಗೌಡ ಅಧ್ಯಕ್ಷತೆ ವಹಿಸಿದ್ದು ಶಿಬಿರದಲ್ಲಿ ಭಾಗವಹಿಸಿ ತರಬೇತಿಯನ್ನು ಪಡೆದು ಮಕ್ಕಳು ಸಂಸ್ಕಾರವಂತರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಮಾತುಗಾರರಾಗಿದ್ದ ಕೇಂದ್ರದ ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್ ಮಾತನಾಡಿ ಔಪಚಾರಿಕ ಶಿಕ್ಷಣ ಕ್ರಮದಲ್ಲಿ ಇರದ ಹಲವು ವಿಚಾರಗಳಲ್ಲಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿ ನೀಡಲಾಗುವುದೆಂದರು.


ಕುಮಾರಿ ಅಂಜಲಿ ಪ್ರಾರ್ಥಿಸಿದರು. ವಂಶಿಕ್ ಸ್ವಾಗತಿಸಿದರು. ಸಮಿತಿಯ ಪರಿಚಯದೊಂದಿಗೆ ಪ್ರಸ್ಥಾವನೆ ಯನ್ನು ಮುಖ್ಯ ಶಿಕ್ಷಕಿ ಪ್ರೇಮಲತಾ ಮಾಡಿದರು. ಶಿಬಿರಾರ್ಥಿಗಳ ಪೋಷಕರಿಗೆ ಭಾರತಿ ಯಂ. ಯಲ್ ಸೂಚನೆಗಳನ್ನು ನೀಡಿದರು. ವೈಷ್ಣವಿ ಕಾರ್ಯಕ್ರಮ ನಿರೂಪಿಸಿ ಕು. ಅಭಿಕ್ಷ ವಂದಿಸಿದರು. ಕೇಂದ್ರದ ಶಿಕ್ಷಕರಾದ ಸುಕೇಶ್,ನಿತಿನ್, ಸತೀಶ ಮತ್ತು ಕಳಿಯ ಶಾಖೆಯ ಯೋಗ ಬಂಧುಗಳು ಸಹಕಾರ ನೀಡಿದರು.

Leave a Reply

Your email address will not be published. Required fields are marked *