ಕನ್ಯಾಡಿ:(ಎ.10) ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿಯಲ್ಲಿ ದಿನಾಂಕ 01-04-25ರಿಂದ 03-04-25 ರ ವರೆಗೆ ಮೂರು ದಿನಗಳ ಕಾಲ ಬೇಸಿಗೆ ಶಿಬಿರ ಆಯೋಜಿಸಲಾಗಿದ್ದು ಅದರ ಸಮಾರೋಪ ಕಾರ್ಯಕ್ರಮವು ದಿನಾಂಕ 03-04-25( ಗುರುವಾರ) ರಂದು ನಡೆಯಿತು.

ಇದನ್ನೂ ಓದಿ: 🟣ಉಜಿರೆ: ಎಸ್.ಡಿ.ಎಂ ಪ.ಪೂ. ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿ ಸಂಸ್ಕೃತದಲ್ಲಿ ಪೂರ್ಣಾಂಕ
ಈ ಮೂರು ದಿನದ ಕಾರ್ಯಾಗಾರದಲ್ಲಿ ಲಘು ಸಂಗೀತ, ಧ್ಯಾನ ಕಥೆಗಳು ಮತ್ತು ಆಟಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಹಾರ್ಟ್ ಫುಲ್ ನೆಸ್ ಧ್ಯಾನ ಕೇಂದ್ರ ಕನ್ಯಾಡಿ 2 ಇಲ್ಲಿನ ಶ್ರೀಮತಿ ವತ್ಸಲಾ, ಶ್ರೀಮತಿ ಸಾವಿತ್ರಿ, ಶ್ರೀಮತಿ ವೀಣಾ, ಶ್ರೀಮತಿ ಸುಮತಿ, ಸಂಗೀತ ಶಿಕ್ಷಕರಾದ ಶ್ರೀಯುತ ಕಮಲಾಕ್ಷ ಗುಡಿಗಾರ ಇವರೆಲ್ಲರಿಂದ ಮಕ್ಕಳು ಹೆಚ್ಚು ವಿಷಯಗಳನ್ನು ಕಲಿತರು ಮತ್ತು ಅದರ ಪ್ರಯೋಜನವನ್ನು ಪಡೆದುಕೊಂಡರು .


ಈ ಸಮಾರೋಪ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಸಿ ಅಧ್ಯಕ್ಷರಾದ ಶ್ರೀ ಕೆ.ನಂದ , ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಪುಷ್ಪಾಎನ್, ಶಾಲಾ ಶಿಕ್ಷಕ ವೃಂದ, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್, ಧನ್ಯವಾದ ಶಾಲಾ ಶಿಕ್ಷಕಿ ಶ್ರೀಮತಿ ತೇಜಸ್ವಿ, ನಿರೂಪಣೆಯನ್ನು ಶಾಲಾ ಶಿಕ್ಷಕಿ ರಾಜಶ್ರೀ ನಡೆಸಿಕೊಟ್ಟರು.


